ADVERTISEMENT

ಕಕ್ಕೇರಾ: 17 ದಿನಗಳಿಂದ ವಿದ್ಯುತ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:37 IST
Last Updated 2 ಜುಲೈ 2024, 14:37 IST
ಕಕ್ಕೇರಾ ಪುರಸಭೆಯ 14ನೇ ವಾರ್ಡ್‌ನಲ್ಲಿರುವ ಸಿ.ಆರ್.ಕ್ಯಾಂಪ್‌ನಲ್ಲಿ 17 ದಿನಗಳ ಹಿಂದೆ ಲಾರಿ ಡಿಕ್ಕಿ ಹೊಡೆದಿದ್ದ ವಿದ್ಯುತ್ ಕಂಬ ಬಾಗಿರುವುದು
ಕಕ್ಕೇರಾ ಪುರಸಭೆಯ 14ನೇ ವಾರ್ಡ್‌ನಲ್ಲಿರುವ ಸಿ.ಆರ್.ಕ್ಯಾಂಪ್‌ನಲ್ಲಿ 17 ದಿನಗಳ ಹಿಂದೆ ಲಾರಿ ಡಿಕ್ಕಿ ಹೊಡೆದಿದ್ದ ವಿದ್ಯುತ್ ಕಂಬ ಬಾಗಿರುವುದು   

ಕಕ್ಕೇರಾ: ಪುರಸಭೆ 14 ವಾರ್ಡ್‌ನ ಸಿ.ಆರ್ ಕ್ಯಾಂಪ್ ಸಮೀಪದಲ್ಲಿ 14 ದಿನಗಳ ಹಿಂದೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪ್ರಯುಕ್ತ 2 ಕಂಬಗಳು ಮುರಿದಿದ್ದು, 17 ದಿನಗಳಾದರೂ ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ತಕ್ತಪಡಿಸಿದ್ದಾರೆ.

ಈಚೆಗೆ ಶಾಸಕ ಸಹೋದರ ರಾಜಾ ವಿಜಯಕುಮಾರನಾಯಕ ದೂರವಾಣಿ ಮುಖಾಂತರ ಹೇಳಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೋರಾಟ ಮಾಡವುದು ಅನಿವಾರ್ಯವಾಗಿದೆ ಎಂದು ನಿವಾಸಿಗರು ಹೇಳಿದರು.

ಡಿಕ್ಕಿ ಹೊಡೆದ ಲಾರಿ ಚಾಲಕನಿಂದ ₹12 ಸಾವಿರ ಪಡೆದ ಜೆಸ್ಕಾಂ ಸಿಬ್ಬಂದಿ, ‘ನಾನು ತೆಗೆದುಕೊಂಡಿಲ್ಲ’ ಎಂದರು. ‘ನಾವೇ ಮುಂದೆ ನಿಂತು ಹಣ ಫೋನ್‌ ಪೇ ಮಾಡಿಸಿದ್ದೇವೆ’ ಎಂದು ಸ್ಥಳೀಯರು ಆಕ್ರೋಶ ಮಾಡಿದಾಗ ನಂತರ ಸಿಬ್ಬಂದಿ ಒಪ್ಪಿಕೊಂಡರು ಎಂದು ತಿಳಿದುಬಂದಿದೆ.

ADVERTISEMENT

ಶೀಘ್ರವೇ ವಿದ್ಯುತ್ ಸಮಸ್ಯೆ ಬಗೆಹರಿಸಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ಚಾಂದಸಾಬ ದಖನಿ, ಅಬ್ದುಲಸಾಬ ದೇವಾಪುರ, ಧರುಸಾಬ, ಅಮರಪ್ಪ ಭೂತ, ಬಸಣ್ಣ ಜಂಪಾ, ಶಿವಪ್ಪ ಬಿಜಾಸಪುರ, ಯಂಕಪ್ಪ ಬಿಜಾಸಪುರ, ಸೋಮಣ್ಣ ಬ್ಯಾಳಿ, ಶಾಂತಪ್ಪ ಕಾರಲಕುಂಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.