ಸುರಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಮತದಾರರ ಪಾತ್ರ ಬಹುಮುಖ್ಯ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇ.ಒ. ಚಂದ್ರಶೇಖರ ಪವಾರ್ ತಿಳಿಸಿದರು.
ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್‍ಎಸ್‍ಎಸ್ ಘಟಕ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲ್ನಡಿಗೆ ಜಾಥಾದ ಮೂಲಕ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾನದ ಜಾಗೃತಿ ಮೂಡಿಸಿದರು. ಕಾಲೇಜಿನಿಂದ ವೇಣುಗೋಪಾಲಸ್ವಾಮಿ ದೇವಸ್ಥಾನ ಮಾರ್ಗವಾಗಿ, ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ ಮತ್ತು ಗಾಂಧಿ ವೃತ್ತದಲ್ಲಿ ಜಾಥಾ ಜರುಗಿತು.
ಪ್ರಾಂಶುಪಾಲ ಶ್ರೀಕಾಂತ ಜಿ.ಕೆ., ಉಪನ್ಯಾಸಕರಾದ ರೇಣುಕಾ ಪಸ್ತಾಪುರ, ಶ್ಯಾಮಲಾ ಯಾದವ್, ಶ್ರೀಶೈಲ ಹಿರೇಮಠ, ಸಿದ್ಧರಾಮ, ಶ್ರೀನಿವಾಸನಾಯಕ, ಸಿದ್ದರಾಮ ಪಾಟೀಲ, ಶಿಲ್ಪಾ, ಎಸ್‍ಎಸ್‍ಎಸ್ ಅಧಿಕಾರಿ ರಾಮನಗೌಡ ಪಾಟೀಲ ಸೇರಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನೌಕರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.