ADVERTISEMENT

ಕಾರ್ಮಿಕರ ಕೊರತೆ: ರೈತರು ಹೈರಾಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:08 IST
Last Updated 21 ನವೆಂಬರ್ 2024, 16:08 IST
ಕೆಂಭಾವಿ ಸಮೀಪ ಯಾಳಗಿ ಗ್ರಾಮದ ಜಮೀನೊಂದರಲ್ಲಿ ಕಾರ್ಮಿಕರ ಕೊರತೆಯಿಂದ ಬಿಡಿಸದೇ ಹಾಗೆ ಬಿಟ್ಟಿರುವುದು
ಕೆಂಭಾವಿ ಸಮೀಪ ಯಾಳಗಿ ಗ್ರಾಮದ ಜಮೀನೊಂದರಲ್ಲಿ ಕಾರ್ಮಿಕರ ಕೊರತೆಯಿಂದ ಬಿಡಿಸದೇ ಹಾಗೆ ಬಿಟ್ಟಿರುವುದು   

ಕೆಂಭಾವಿ: ಪಟ್ಟಣ ಸೇರಿ ವಲಯದ ಹಲವು ಭಾಗಗಳಲ್ಲಿರೈತರು ಹತ್ತಿ ಬೆಳೆ ಬೆಳೆದಿದ್ದು, ಜಮೀನುಗಳಲ್ಲಿ ಹತ್ತಿ ಬಿಡಿಸಲು ಕಾರ್ಮಿಕರ ಕೊರತೆ ಕಾಡುತ್ತಿದೆ.

ಕಳೆದ ವರ್ಷ ಪ್ರತಿ ಕೆ.ಜಿ ಹತ್ತಿ ಬಿಡಿಸಲು ₹ 8ರಿಂದ ₹10 ನೀಡಲಾಗುತ್ತಿತ್ತು. ಈಗ ಅದು ₹ 12 ರಿಂದ ₹15ಕ್ಕೆ ಏರಿದೆ. ಕೂಲಿ ದರ ಹೆಚ್ಚಳದಿಂದ ಹಲವು ಸಣ್ಣ ರೈತರು ಹತ್ತಿ ಬಿಡಿಸುವ ಗೋಜಿಗೂ ಹೋಗಿಲ್ಲ. ಇದರಿಂದ ಹತ್ತಿ ಹೊಲಗಳು ಬಿಳಿಮಯವಾಗಿ ಕಾಣುತ್ತಿವೆ.

ದಲ್ಲಾಳಿಗಳ ಹಾವಳಿ-ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುವ ವಾಹನಗಳ ಚಾಲಕರೇ ಮುಖ್ಯವಾಗಿ ಕಾರ್ಮಿಕರ ದಲ್ಲಾಳಿಗಳಾಗಿದ್ದು, ಕೂಲಿ ಹಣ ಏರಿಸುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ADVERTISEMENT

ಪ್ರತಿ ಕೆ.ಜಿಗೆ ₹10 ರಿಂದ ₹ 15 ನೀಡುವುದಾಗಿ ಕಾರ್ಮಿಕರನ್ನು ಕರೆಸಿದ ಬಳಿಕ ಜಮೀನುಗಳಿಗೆ ಬಂದ  ಕಾರ್ಮಿಕರು ಹೆಚ್ಚಿನ ಮೊತ್ತ ನೀಡುವಂತೆ ಪಟ್ಟು ಹಿಡಿದ ಘಟನೆಗಳು ನಡೆದಿವೆ. ಕೂಲಿ ಕಾರ್ಮಿಕರ ಕೊರತೆಯಿಂದ ಈ ಬಾರಿ ಹತ್ತಿ ಉತ್ತಮ ಫಸಲು ಬಂದಿದ್ದರೂ ರೈತರಿಗೆ ಹತ್ತಿ ಬಿಡಿಸಲಾಗದ ಕಾರಣ ಜಮೀನಿನಲ್ಲಿಯೇ ಉಳಿಯುವ ಭೀತಿ ಎದುರಾಗಿದೆ. ದರ ಕುಸಿತದಿಂದ ಕಂಗಲಾಗಿರುವ ರೈತರಿಗೆ ಇತ್ತ ಕಾರ್ಮಿಕರ ಕೊರತೆ ದೊಡ್ಡ ತಲೆ ನೋವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.