ADVERTISEMENT

ಅಂತರರಾಷ್ಟ್ರೀಯ ವಕೀಲರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:23 IST
Last Updated 8 ನವೆಂಬರ್ 2024, 14:23 IST
ಸುರಪುರದ ವಕೀಲರ ಸಂಘದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ನೋಟರಿ ವಕೀಲರ ದಿನ ಆಚರಿಸಲಾಯಿತು
ಸುರಪುರದ ವಕೀಲರ ಸಂಘದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ನೋಟರಿ ವಕೀಲರ ದಿನ ಆಚರಿಸಲಾಯಿತು   

ಸುರಪುರ: ‘ಲಿಖಿತ ದಾಖಲೆಗಳ ನೋಟರಿಯಿಂದ ಪ್ರಮಾಣೀಕೃತ ದಸ್ತಾವೇಜು ನ್ಯಾಯ ಸಮ್ಮತ ದಾಖಲೆಗಳೆಂದು ಪರಿಗಣಿಸಲಾಗುವುದು’ ಎಂದು ನೋಟರಿ ವಕೀಲ ಅಪ್ಪಾಸಾಹೇಬ ಪಾಟೀಲ ಹೇಳಿದರು.

ನಗರದ ನ್ಯಾಯಾಲಯದ ವಕೀಲರ ಸಂಘದ ಕಾರ್ಯಾಲಯದಲ್ಲಿ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಅವರ ನೇತೃತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ನೋಟರಿ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ನೋಟರಿ ವಕೀಲರ ಸಂಘದ ಅಧ್ಯಕ್ಷ ಜಿ.ತಮ್ಮಣ್ಣ ಮಾತನಾಡಿ, ‘ವಕೀಲರು ಅಫಡವಿಟ್‌ಗಾಗಿ ತಮ್ಮ ಸಹಿಯೊಂದಿಗೆ ಕಕ್ಷಿದಾರರ ಜತೆಗೆ ತಾವುಗಳು ಬಂದು ಅಪ್ಡೇಟ್ ಮಾಡಿಸಿಕೊಂಡು ಶಿಸ್ತು ಪಾಲನೆಯೊಂದಿಗೆ ಕಾನೂನನ್ನು ಗೌರವಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿ ಮೂಲಕ ಸಂಭ್ರಮಿಸಿದರು. ಎನ್.ಜೆ. ಬಾಕ್ಲಿ, ಬಿ.ಕಿಲ್ಲೆದಾರ, ಬಿ.ಡಿ. ಅನ್ಸೂರ, ನಿಂಗಣ್ಣ ಚಿಂಚೋಡಿ, ಅರವಿಂದ ಕುಮಾರ, ವಿ.ಸಿ. ಪಾಟೀಲ, ರಾಮನಗೌಡ ಸುಬೇದಾರ, ಸುರೇಂದ್ರ ದೊಡ್ಡಮನಿ, ಅಪ್ಪಣ್ಣ ಗಾಯಕವಾಡ, ಸಂಗಣ್ಣ ಬಾಕ್ಲಿ, ಜಗದೀಶ ದೇಸಾಯಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಟಿ. ಮಂಗಗಿಹಾಳ, ಎ.ವೆಂಕಟೇಶ, ವೆಂಕಟೇಶ ಕುಂಬಾರಪೇಟ, ಜಿ.ಆರ್. ಬನ್ನಾಳ, ಆನಂದರೆಡ್ಡಿ, ಎಂ.ಎ. ಸಾವರ, ಸಂಗಣ್ಣ ಚೊಕ್ಕ, ನಾಗಪ್ಪ ಚಾವಲ್ಕರ, ಮಂಜು ಗುಡುಗುಂಟಿ, ಶಿವಶರಣ ಟಿ., ಎಂ.ಎಂ. ಬಡಿಗೇರ, ಪರಶುರಾಮ ಪರಸನಹಳ್ಳಿ, ಶಂಕರ ಬಾದ್ಯಾಪುರ, ಶ್ರೀನಿವಾಸ ಚಿನ್ನೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.