ADVERTISEMENT

ಯಾದಗಿರಿ: ಕೊಲೆ ಯತ್ನ ಪ್ರಕರಣ ಸಂಬಂಧ ಮತ್ತೆ ನಾಲ್ವರ ಬಂಧನ

ಜಿಪಂ ಸದಸ್ಯನ ಕೊಲೆ ಯತ್ನ: ಮೈಸೂರಿನಲ್ಲಿ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:27 IST
Last Updated 13 ಜುಲೈ 2020, 16:27 IST
ಕೊಲೆ ಯತ್ನಕ್ಕೆ ಬಳಸಿದ ಕಾರು
ಕೊಲೆ ಯತ್ನಕ್ಕೆ ಬಳಸಿದ ಕಾರು   

ಯಾದಗಿರಿ: ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಮರಿಲಿಂಗಪ್ಪ ಕರ್ನಾಳ ಅವರ ಮೇಲೆ ಜೂನ್‌ 24ರಂದು ನಡೆದಿದ್ದ ಸುಪಾರಿ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯವರೆಗೆ 9 ಆರೋಪಿಗಳನ್ನು ಬಂಧಿಸಿದಂತೆ ಆಗಿದೆ.

ಮೂವರು ಆರೋಪಿಗಳು ಮೈಸೂರಿನವರು, ಇನ್ನೊಬ್ಬ ಆರೋಪಿ ರಾಯಚೂರಿನವ.ಮಹೇಶ ರಾಮಶೆಟ್ಟಿ, ಮಂಜು ದೇವರಾಜ, ಮಾನಸ್‌ ನಾಯ್ಡು ಎಂಬುವರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಯಾದ ರಾಯಚೂರಿನ ಅಮರೇಶ ಸವರಪ‍್ಪ ನಾಯಕನನ್ನು ರಾಯಚೂರ ಸಮೀಪದ 7ನೇ ಮೈಲ್‌ ಕ್ರಾಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಸಿಪಿಐ ಶರಣಗೌಡ ನ್ಯಾಮಣ್ಣನವರ್‌, ಪಿಎಸ್‌ಐ ನಾನಗೌಡ, ಸಿದ್ರಾಮ ಬಳೂರ್ಗಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

ADVERTISEMENT

ಈ ಹಿಂದೆ ಜುಲೈ 4ರಂದು ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಸೋಮವಾರ ಬಂಧಿಸಿದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.