ADVERTISEMENT

ನಾರಾಯಣಪುರ: ಡೋಣಿ ನದಿಗೆ ಉರುಳಿದ ಸಿಲಿಂಡರ್ ತುಂಬಿದ ಲಾರಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 6:36 IST
Last Updated 8 ಫೆಬ್ರುವರಿ 2024, 6:36 IST
ಚಾಲಕನ ನಿಯಂತ್ರಣ ತಪ್ಪಿದ ಕಾರಣ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯು ನಾರಾಯಣಪುರ ಸಮೀಪದ ಕೊಡೇಕಲ್ ಹೊರವಲಯದ ಡೋಣಿ ನದಿಗೆ ಉರುಳಿದೆ
ಚಾಲಕನ ನಿಯಂತ್ರಣ ತಪ್ಪಿದ ಕಾರಣ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯು ನಾರಾಯಣಪುರ ಸಮೀಪದ ಕೊಡೇಕಲ್ ಹೊರವಲಯದ ಡೋಣಿ ನದಿಗೆ ಉರುಳಿದೆ   

ನಾರಾಯಣಪುರ: ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ದೋಣಿ ನದಿಗೆ ಉರುಳಿದ ಘಟನೆ ಬುಧವಾರ ಬೆಳಗಿನ ಜಾವ ಕೊಡೇಕಲ್ ಹೊರವಲಯದಲ್ಲಿ ನಡೆದಿದೆ.

ಕೊಡೇಕಲ್ ಗ್ರಾಮದಲ್ಲಿರುವ ಎಚ್.ಪಿ ಗ್ಯಾಸ್ ವಿತರಕರಿಗೆ ವಿತರಿಸಲು 300ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ನಾರಾಯಣಪುರ ರಸ್ತೆಯ ಮಾರ್ಗವಾಗಿ ಸಾಗಿಸಲಾಗುತ್ತಿತ್ತು.

ಕೊಡೇಕಲ್‌ಗೆ ಬರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಡೋಣಿ ನದಿಯ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಅದೃಷ್ಟವಷಾತ್ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ. ಆದರೆ, ಸೇತುವೆ ಮೇಲಿಂದ ಡೋಣಿ ನದಿಯಲ್ಲಿ ಲಾರಿ ಬಿದ್ದ ಪರಿಣಾಮವಾಗಿ ಲಾರಿಯಲ್ಲಿದ್ದ ಸಿಲಿಂಡರ್‌ಗಳು ಚಲ್ಲಾಪಿಲ್ಲಿಯಾಗಿ ನೀರಿನಲ್ಲಿ ಬಿದ್ದಿವೆ. ಘಟನಾ ಸ್ಥಳಕ್ಕೆ ಪೊಲಿಸರು ಆಗಮಿಸಿ ಪರಿಶೀಲನೆ ನಡೆಸಿದರು. ಬೆಳಗಿನ ಜಾವ ಚಾಲಕ ನಿದ್ದೆ ಮಂಪರಿನಲ್ಲಿರುವುದೇ ಘಟನೆಗೆ ಕಾರಣ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.