ಗುರುಮಠಕಲ್: ‘ದೇಶದಾದ್ಯಂತ ಹಂಚಿಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಾಧನೆ ಚಿರ ಸ್ಮರಣೀಯ’ ಎಂದು ಪುರಸಭೆ ಸದಸ್ಯ ಆಶನ್ನ ಬುದ್ಧ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಗುರುವಾರ ನಡೆದ ಏಕತಾ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೂರಗಾಮಿ ಚಿಂತನೆ, ದಿಟ್ಟ ನಿರ್ಧಾರ ಹಾಗೂ ಬದ್ಧತೆಯ ಕಾರಣಕ್ಕೆ ಅವರು ಆ ನಿರ್ಧಾರವನ್ನು ತೆಗೆದುಕೊಂಡರು. ಆದ್ದರಿಂದಲೇ ಅವರು ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುತ್ತಾರೆ ಎಂದರು.
ಯಾರ ನೆರವು ಪಡೆಯದೇ ಬ್ರಿಟನ್‌ಗೆ ತೆರಳಿ ಬ್ಯಾರಿಸ್ಟರ್ ಪದವಿ ಪಡೆದಿದ್ದರು. ಅಹಮದಾಬಾದ್‌ನಲ್ಲಿ ನೆಲೆನಿಂತು ಅಗ್ರಗಣ್ಯ ವಕೀಲರೆನಿಸಿಕೊಂಡರು ಎಂದು ಹೇಳಿದರು.
ಹೃದಯವಂತಿಕೆ, ಹಿರಿಮೆ, ದೇಶಪ್ರೇಮ, ದೃಢತೆ ಹಾಗೂ ಕ್ರಿಯಾಶೀಲತೆಯಿಂದ ಅವರು ಭಾರತದ ಇತಿಹಾಸದಲ್ಲಿ ಸದಾ ಪ್ರಜ್ವಲಿಸುವ ಹಣತೆಯಂತೆ ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಕೃಪ್ಣಪ್ಪ ಮೇದಾ, ಅಶೋಕ ಕಲಾಲ್, ಬಾಬು ತಲಾರಿ, ಪಾಪಿರೆಡ್ಡಿ, ಬಾಲು ದಾಸರಿ, ಅನ್ವರ್, ನರಸಪ್ಪ ಗಡ್ಡಲ್, ರವಿಂದ್ರರೆಡ್ಡಿ ಗವಿನೋಳ್ ಹಾಗೂ ಸೈಯಾದ್ ಜಾಫರ್ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.