ADVERTISEMENT

ಹುಣಸಗಿ: ಹಗರಟಗಿ ಗ್ರಾಮಸ್ಥರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 15:38 IST
Last Updated 29 ಏಪ್ರಿಲ್ 2020, 15:38 IST
ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮಸ್ಥರು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ 1.11 ಲಕ್ಷ ಮೊತ್ತದ ಚೆಕ್‌ನ್ನು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ನೀಡಿದರು
ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮಸ್ಥರು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ 1.11 ಲಕ್ಷ ಮೊತ್ತದ ಚೆಕ್‌ನ್ನು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ನೀಡಿದರು   

ಹುಣಸಗಿ: ರಾಜ್ಯದ ಜನತೆಯ ಸಂಕಷ್ಟದಲ್ಲಿ ಎಲ್ಲರೂ ಪಾಲುದಾರರಾಗಿದ್ದು, ಅವರ ನೆರವಿಗೆ ಬರುವ ನಿಟ್ಟಿನಲ್ಲಿ ಹಗರಟಗಿ ಗ್ರಾಮಸ್ಥರು ಮಾದರಿ ಕಾರ್ಯ ಮಾಡಿದ್ದಾರೆ ಎಂದು ತಹಶೀಲ್ದಾರ್ ವಿನಯಕುಮಾರ ಪಾಟೀಲ ಹೇಳಿದರು.

ಬುಧವಾರ ಹಗರಟಗಿ ಗ್ರಾಮಸ್ಥರು ನೀಡಿದ 1.11 ಲಕ್ಷ ಮೊತ್ತದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್‌‌ ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯ ಗಡಿ ಗ್ರಾಮ ಮತ್ತು ಐತಿಹಾಸಿಕ ಮಹತ್ವವನ್ನು ಈ ಹಗರಟಗಿ ಗ್ರಾಮವು ಹೊಂದಿದ್ದು, ಇಲ್ಲಿನ ಜನರು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಪಕ್ಕದ ವಿಜಯಪುರ ಸೇರಿದಂತೆ ಇತರ ಭಾಗಗಳಿಗೆ ತೆರಳಬಾರದು ಎಂದರು.

ADVERTISEMENT

ಗ್ರಾಮಸ್ಥರು ಮಾತನಾಡಿ, ದಯವಿಟ್ಟು ನಮ್ಮ ಗ್ರಾಮದ ಹೆಸರು ಮಾತ್ರ ಇರಲಿ. ಎಲ್ಲಿಯೂ ವ್ಯಕ್ತಿಯ ಹೆಸರು ಬೇಡ. ಇದು ಇತರರಿಗೆ ಪ್ರೇರಣೆಯಾಗಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.