ADVERTISEMENT

ಭತ್ತದ ದರ ಇಳಿಕೆ: ಭತ್ತ ಬೆಳೆದ ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 15:16 IST
Last Updated 11 ನವೆಂಬರ್ 2024, 15:16 IST
ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಗದ್ದೆಯೊಂದರಲ್ಲಿ ಯಂತ್ರದ ಸಹಾಯದಿಂದ ಭತ್ತ ಕಟಾವು ಮಾಡಲಾಗುತ್ತಿದೆ
ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಗದ್ದೆಯೊಂದರಲ್ಲಿ ಯಂತ್ರದ ಸಹಾಯದಿಂದ ಭತ್ತ ಕಟಾವು ಮಾಡಲಾಗುತ್ತಿದೆ   

ವಡಗೇರಾ: ತಾಲ್ಲೂಕಿನ ಭೀಮಾ ಹಾಗೂ ಕೃಷ್ಣಾ ನದಿಯ ತೀರದ ಪ್ರದೇಶಗಳಲ್ಲಿ ಅನೇಕ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡಲು ಹರಸಾಹಸ ಪಡುತಿದ್ದಾರೆ. ಏಕೆಂದರೆ ಭತ್ತವನ್ನು ಕಟಾವು ಮಾಡುವ ಯಂತ್ರಗಳ ಬಾಡಿಗೆ ಹೆಚ್ಚಳ ಹಾಗೂ ಭತ್ತದ ಖರೀದಿ ಬೆಲೆ ಇಳಿಕೆಯಿಂದಾಗಿ ರೈತರು ಆತಂಕ ಪಡುವಂತಾಗಿದೆ

ತಾಲ್ಲೂಕಿನ ಕೊಂಕಲ್, ಗೊಂದೆನೂರ, ಚೆನ್ನೂರ, ತುಮಕೂರ, ಹಯ್ಯಾಳ, ಬೆಂಡೆಬೆಂಬಳಿ, ಗೋಡಿಹಾಳ, ಕುಮನೂರ ಹಾಗೂ ಇನ್ನಿತರ ಕಡೆಗಳಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಭತ್ತವನ್ನು ಬೆಳೆದಿದ್ದಾರೆ.

ಭತ್ತ ಕಟಾವು ಯಂತ್ರಗಳ ಬಾಡಿಗೆ ಈ ಹಿಂದೆ ಗಂಟೆಗೆ ₹1800 ಇತ್ತು. ಆದರೆ, ಈ ವರ್ಷ ಪ್ರತಿ ಗಂಟೆಗೆ ₹2200 ದಿಂದ ₹2300 ಬಾಡಿಗೆ ನಿಗದಿ ಮಾಡಿರುವದರಿಂದ ರೈತರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ

ADVERTISEMENT

ಕಳೆದ ವರ್ಷ ಭತ್ತದ ಬೆಲೆ ಪ್ರತಿ ಕ್ವಿಂಟಲ್‌ಗೆ ₹1850 ರಿಂದ ₹2200 ಇತ್ತು. ಆದರೆ, ಈ ವರ್ಷ ಪ್ರತಿ ಕ್ವಿಂಟಲ್ ಭತ್ತಕ್ಕೆ ₹1650 ರಿಂದ ₹1750 ಇದೆ ( ಭತ್ತದ ಗದ್ದೆಯಲ್ಲಿ ರಾಸಿಯಾದ ಹಸಿ ಭತ್ತಕ್ಕೆ ಮಾತ್ರ ) ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಭತ್ತದ ಬೆಲೆಯಲ್ಲಿ ಇಳಿಕೆಯಾಗಿದೆ. ಇರಿಂದ ರೈತರು ಕಂಗಾಲಾಗಿದ್ದಾರೆ.

’ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಭತ್ತ ರಾಶಿ ಮಾಡುವ ಯಂತ್ರಗಳ ಬಾಡಿಗೆ ಇಳಿಕೆಗಾಗಿ ಕ್ರಮ ಕೈಗೊಳ್ಳವುದರ ಜತೆಗೆ ಭತ್ತ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ತಾಲ್ಲೂಕಿನ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.