ADVERTISEMENT

ಪಟ್ಟಣದಲ್ಲಿ ಮಲ್ಲಯ್ಯನ ತೊಟ್ಟಿಲಿನ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:16 IST
Last Updated 15 ಅಕ್ಟೋಬರ್ 2024, 14:16 IST
15 ಎಚ್ ಡಬ್ಲು2 ವಡಗೇರಾ:ವಡಗೇರಾ ಪಟ್ಟಣದಲ್ಲಿ ಮಲ್ಲಯ್ಯನ ತೊಟ್ಟಿಲಿನ ಮೆರವಣಿಗೆಯನ್ನುಪ್ರಮುಖಬೀದಿಗಳಲ್ಲಿಮಾಡಲಾಯಿತು.
15 ಎಚ್ ಡಬ್ಲು2 ವಡಗೇರಾ:ವಡಗೇರಾ ಪಟ್ಟಣದಲ್ಲಿ ಮಲ್ಲಯ್ಯನ ತೊಟ್ಟಿಲಿನ ಮೆರವಣಿಗೆಯನ್ನುಪ್ರಮುಖಬೀದಿಗಳಲ್ಲಿಮಾಡಲಾಯಿತು.   

ವಡಗೇರಾ: ಪ್ರತಿ ವರ್ಷ ವಿಜಯ ದಶಮಿಯನ್ನು ಆಚರಿಸಿದ ಮರುದಿನ ಪಟ್ಟಣದಲ್ಲಿ ಮಲ್ಲಯ್ಯನ ತೊಟ್ಟಿಲಿನ ಭವ್ಯ ಮೆರವಣಿಗೆಯನ್ನು ವಿಜೃಂಭಣೆಯಿಂದಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶನಿವಾರ ವಿಜಯ ದಶಮಿ ಆಚರಿಸಿದ ನಂತರ ರವಿವಾರ ಬೆಳಿಗ್ಗೆ ಮಲ್ಲಯ್ಯನ ತೊಟ್ಟಿಲಿನ ಕಾರ್ಯಕ್ರಮವನ್ನು ಭಕ್ತರು ಸಂಭ್ರಮ ಸಡಗರದಿಂದ ಆಚರಿಸಿದರು.

ಭಾನುವಾರ ಬೆಳಿಗ್ಗೆ ಮಲ್ಲಯ್ಯನ ತೊಟ್ಟಿಲನ್ನು ಬನ್ನಿಗಿಡಕ್ಕೆ ತಂದು ಅಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ, ಉಜುರು ಮುತ್ಯನ ದರ್ಗಾಕ್ಕೆ ತೊಟ್ಟಿಲನ್ನು ತೆಗೆದುಕೊಂಡು ಹೋಗಿ ಅಲ್ಲಿ ಕಾಯಿ ಕರ್ಪೂರ ಸಲ್ಲಿಸಿದರು. ಪಟ್ಟಣದಲ್ಲಿರುವ ಹಾವಣ್ಣ ಗುಡಿಗೆ ಪೂಜೆ ಸಲ್ಲಿಸಿ, ಕೆಂಚಮ್ಮ ದೇವಿಯ ಗುಡಿಯ ಹತ್ತಿರವಿರುವ ಮಲ್ಲಯ್ಯನ ಕಟ್ಟಿಯ ಮೇಲೆ ತೊಟ್ಟಿಲನ್ನು ಪ್ರತಿಷ್ಠಾಪಿಸಿ ಅಲ್ಲಿ ಹಲವಾರು ಧಾರ್ಮಿಕ ಪೂಜಾ ಕಾರ್ಯಗಳನ್ನು ಭಕ್ತರು ನಡೆಸಿದರು.

ನಂತರ ಮಲ್ಲಯ್ಯನ ಚೌಕಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಿಕೊಂಡು ದೇವಸ್ಥಾನಕ್ಕೆ ತಂದು ಗದ್ದುಗೆಯ ಮೇಲೆಪ್ರತಿಷ್ಠಾಪಿಸಲಾಯಿತು.

ADVERTISEMENT

ವಿಜಯ ದಶಮಿಯ ದಿನ ಜನರು ಒಬ್ಬರಿಗೊಬ್ಬರು ಬನ್ನಿ ಮುಡಿದು ಶುಭಾಶಯ ವಿನಿಮಯ ಮಾಡಿಕೊಂಡರೆ ಮಾರನೆಯ ದಿನ ಆಚರಿಸುವ ಮಲ್ಲಯ್ಯನತೊಟ್ಟಿಲುಮೆರವಣಿಗೆಗೆಭವ್ಯಇತಿಹಾಸವಿದೆ. ಮೆರವಣಿಗೆಯ ದಿನಮಲ್ಲಯ್ಯನು ಜನರಿಗೆ ಬನ್ನಿ(ಬಂಗಾರ) ಕೊಟ್ಟು ಆಶೀರ್ವದಿಸುತ್ತಾನೆ ಎಂದು ಭಕ್ತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.