ADVERTISEMENT

ಯಾದಗಿರಿ: ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:59 IST
Last Updated 16 ಜೂನ್ 2024, 15:59 IST
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗಿರಿನಾಡು ಟ್ಯಾಕ್ಸಿ ಚಾಲಕರು ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗಿರಿನಾಡು ಟ್ಯಾಕ್ಸಿ ಚಾಲಕರು ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ಯಾದಗಿರಿ: ರಾತ್ರೋರಾತ್ರಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗಿರಿನಾಡು ಟ್ಯಾಕ್ಸಿ ಚಾಲಕರೊಂದಿಗೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ನೇತೃತ್ವದಲ್ಲಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.

ಟ್ಯಾಕ್ಸಿ ಚಾಲಕರು ಮಾನವ ಸರಪಳಿಯಂತೆ ವಾಹನಗಳನ್ನು ಸರಪಳಿಯನ್ನಾಗಿ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆಯಿಂದ ರೈತರಿಗೆ, ಬಡವರಿಗೆ ಟ್ಯಾಕ್ಸಿ, ಆಟೊ ಚಾಲಕರ ಮೇಲೆ ಹೊರೆಯಾಗುತ್ತಿದ್ದು, ತಕ್ಷಣ ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.

ADVERTISEMENT

ಜನರಿಗೆ ಅನುಕೂಲ ಮಾಡಿಕೊಡಬೇಕಾದರೆ ಸರ್ಕಾರದ ಜನಪ್ರತಿನಿಧಿಗಳು ಪಡೆಯುವ ಸವಲತ್ತುಗಳನ್ನು ತ್ಯಾಗ ಮಾಡಿ ಎಂದು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಈ ವೇಳೆ ಮುಖಂಡರಾದ ರಫೀಕ್ ಪಟೇಲ್, ಬಾಬಾ ಖಾನ್, ನಯೀಮ್‌ ಶೇಕ್, ಮರೆಪ್ಪ, ರಫೀಕ್ ಅಪ್ಸರ್, ವೆಂಕಟರೆಡ್ಡಿ, ಚಂದ್ರಶೇಖರ, ಬನಶಂಕರ್, ಮಹಿಬೂಬ್, ಮುತ್ತು, ಬನ್ನಪ್ಪ, ಜಮಾಲ್ ಬಾಬಾ, ಸಾಬಣ್ಣ, ಬಸ್ಸು, ನವೀನ್, ಖಂಡಪ್ಪ, ಅಯ್ಯಣ್ಣ, ಶಿವು, ಶರಣು, ಅಶೋಕ ಪಾಟೀಲ, ರಶೀದ್ ಪಾಷಾ, ಸಲೀಂ, ಮಲ್ಲನಗೌಡ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.