ADVERTISEMENT

ರಾಯನಗೋಳ: ಜಲಮೂಲಗಳ ಪರಿಶೀಲಿಸಿದ ತಾ.ಪಂ ಇಒ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:51 IST
Last Updated 30 ಮೇ 2024, 15:51 IST
ನಾರಾಯಣಪುರ ರಾಯನಗೋಳ ಗ್ರಾಮಕ್ಕೆ ಹುಣಸಗಿ ತಾಲ್ಲೂಕು ಪಂಚಾಯಿತಿ ಇ.ಒ ಬಸವರಾಜಸ್ವಾಮಿ ಭೇಟಿ ನೀಡಿ ಕುಡಿಯುವ ನೀರಿನ ತೆರೆದ ಬಾವಿ ಪರಿಶೀಲನೆ ನಡೆಸಿದರು
ನಾರಾಯಣಪುರ ರಾಯನಗೋಳ ಗ್ರಾಮಕ್ಕೆ ಹುಣಸಗಿ ತಾಲ್ಲೂಕು ಪಂಚಾಯಿತಿ ಇ.ಒ ಬಸವರಾಜಸ್ವಾಮಿ ಭೇಟಿ ನೀಡಿ ಕುಡಿಯುವ ನೀರಿನ ತೆರೆದ ಬಾವಿ ಪರಿಶೀಲನೆ ನಡೆಸಿದರು   

ನಾರಾಯಣಪುರ: ಜೋಗುಂಡಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯನಗೋಳಕ್ಕೆ ಬುಧವಾರ ಹುಣಸಗಿ ತಾಲ್ಲೂಕು ಪಂಚಾಯಿತಿ ಇಒ ಬಸವರಾಜಸ್ವಾಮಿ ಹಿರೇಮಠ ಭೇಟಿ ನೀಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ತೆರೆದಬಾವಿ ಹಾಗೂ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.

ಈ ವೇಳೆ ಇ.ಒ ಬಸವರಾಜಸ್ವಾಮಿ ಮಾತನಾಡಿ, ಕಳೆದ ವರ್ಷ ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ತಲೆದೊರಿತ್ತು. ಹೀಗಾಗಿ ಮೇಲಾಧಿಕಾರಿಗಳ ನಿರ್ದೇಶನದಂತೆ ಗ್ರಾಮಕ್ಕೆ ಭೇಟಿ ನೀಡಿ ಪ್ರಸ್ತುತ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯ ಎಲ್ಲಾ ಜಲ ಮೂಲಗಳನ್ನು ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಗ್ರಾ.ಪಂ ವತಿಯಿಂದ ತೆರೆದ ಬಾವಿ ಹಾಗೂ ಇತರೆಡೆ ಕ್ಲೋರಿನೇಶನ್ ಮಾಡಲಾಗಿದೆ. ಕೊಳವೆಬಾವಿಗಳ ಸುತ್ತ ಸ್ವಚ್ಛತೆ ಕಾಪಾಡುವಂತೆ ಡಂಗೂರ ಸಾರಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮಸ್ಥರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಟಿಎಚ್ಒ ಭೇಟಿ: ರಾಯನಗೋಳ ಗ್ರಾಮಕ್ಕೆ ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ (ಟಿಎಚ್ಒ) ಡಾ.ಆರ್.ವಿ.ನಾಯಕ ಭೇಟಿ ನೀಡಿ ಗ್ರಾಮದ ಸ್ವಚ್ಛತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ADVERTISEMENT

ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಗ್ರಾಮಸ್ಥರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಆರ್‌ಡಿಡಬ್ಲುಎಸ್ ಎಇಇ ಎಚ್.ಡಿ ಪಾಟೀಲ್, ಪಿಡಿಒ ಹಣಮಂತಪ್ಪ ಹೆಗ್ಗೂರ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.