ADVERTISEMENT

ಕೋಟಾದ ಸೀಟುಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 16:05 IST
Last Updated 2 ಜೂನ್ 2024, 16:05 IST

ಯಾದಗಿರಿ: 2024-25ನೇ ಸಾಲಿನ ಡಿಎಲ್‌ಇಡಿ, ಡಿಪಿಇಡಿ ಮತ್ತು ಡಿಪಿಎಸ್‌ಇ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟುಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಹಾಗೂ ಉಪನಿರ್ದೇಶಕ (ಅಭಿವೃದ್ಧಿ) ತಿಳಿಸಿದ್ದಾರೆ.

ಆಸಕ್ತರು ಇಲಾಖೆಯ ವೆಬ್‌ಸೈಟ್ www.schooleducation.karnataka.gov.in ಅಂತರ್ಜಾಲದಲ್ಲಿ  ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿಮಾಡಿ ಸೂಕ್ತ ದಾಖಲೆಗಳೊಂದಿಗೆ, ಬ್ಯಾಂಕ್ ಡಿಡಿಯೊಂದಿಗೆ ಡಯಟ್ ಯಾದಗಿರಿ ಕಚೇರಿಗೆ ಜೂನ್ 5ರೊಳಗೆ ಸಲ್ಲಿಸಬೇಕು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಾದಗಿರಿ, ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಕಲಿಕಾ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳು ಪಿಎಸ್‌ಟಿಇ ಮುಖ್ಯಸ್ಥರು 70220 76995ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.