ADVERTISEMENT

‘ನಕಲಿ ಬೀಜ ಮಾರಾಟ; ಪರವಾನಗಿ ರದ್ದು’

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:41 IST
Last Updated 19 ಜೂನ್ 2024, 15:41 IST
ವಡಗೇರಾ ಪಟ್ಟಣದಲ್ಲಿರುವ ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ಅಂಗಡಿಗಳಿಗೆ ವಡಗೇರಾ ತಹಶೀಲ್ದಾರ್‌ ಶ್ರೀನಿವಾಸ್ ಚಾಪೆಲ್ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಡಗೇರಾ ಪಟ್ಟಣದಲ್ಲಿರುವ ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ಅಂಗಡಿಗಳಿಗೆ ವಡಗೇರಾ ತಹಶೀಲ್ದಾರ್‌ ಶ್ರೀನಿವಾಸ್ ಚಾಪೆಲ್ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ವಡಗೇರಾ: ನಕಲಿ ಬೀಜಗಳ ಮಾರಾಟ ಮಾಡಿದ್ದು ಕಂಡುಬಂದರೆ ಅಂತಹ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಡಗೇರಾ ತಹಶೀಲ್ದಾರ್‌ ಶ್ರೀನಿವಾಸ್ ಚಾಪೆಲ್ ಎಚ್ಚರಿಸಿದರು.

ವಡಗೇರಾ ಪಟ್ಟಣದಲ್ಲಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರ ಅಂಗಡಿಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು

ಪ್ರತಿ ಅಂಗಡಿಯ ಮಾಲೀಕರು ಕಡ್ಡಾಯವಾಗಿ ರೈತರಿಗೆ ರಸೀದಿಗಳನ್ನು ನೀಡಬೇಕು ಮತ್ತು ಬೀಜ ಗೊಬ್ಬರಗಳ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡು ಬಂದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಹೇಳಿದರು.

ADVERTISEMENT

ರಸಗೊಬ್ಬರ ಮಾರಾಟಗಾರರು ಅಂಗಡಿಯಲ್ಲಿ ಬೀಜ, ಗೊಬ್ಬರಗಳ ಮಾಹಿತಿ ದರ ಪಟ್ಟಿಯನ್ನು ನಮೂದಿಸದಿರುವುದು ಹಾಗೂ ರೈತರಿಗೆ ಕಂಪ್ಯೂಟರ್ ಬಿಲ್‌ಗಳನ್ನು ನೀಡದಿರುವುದಕ್ಕೆ ಅಂಗಡಿ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಬೀಜ, ಗೊಬ್ಬರಗಳನ್ನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ಹಣವನ್ನು ತೆಗೆದುಕೊಂಡರೆ ಅಂತಹ ಅಂಗಡಿಯ ಮಾಲೀಕರ ವಿರುದ್ಧ ಕ್ರಿಮಿನಲ್ ದಾವೆಯನ್ನು ಹೂಡಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಸಂಜೀವ್ ಕುಮಾರ್ ಕಾವಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.