ಕೆಂಭಾವಿ: ಪಟ್ಟಣದ ಭೋಗೇಶ್ವರನ ದೇವಸ್ಥಾನದಲ್ಲಿ ಮಂಗಳವಾರ ಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆಯಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅರ್ಚಕ ರಾಜಶೇಖರಯ್ಯ ಹಿರೇಮಠ, ಸಂಗಣ್ಣ ತುಂಬಗಿ, ಮೋಹನರೆಡ್ಡಿ ಡಿಗ್ಗಾವಿ, ಮಲ್ಲಿಕಾರ್ಜುನ ಬಿದರಿ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ಗುರು ಕುಂಬಾರ, ಮಲ್ಲು ಅಂಗಡಿ, ಮಲ್ಲು ಕುಂಬಾರ, ರಮೇಶ ಟಕ್ಕಳಕಿ, ದೇವು ಹಡಪದ, ಶರಣು ಖಾನಾಪುರ, ಮಹಾಂತೇಶ, ತಿಪ್ಪಣ್ಣ, ವಿಶ್ವ ಅವರ ನೇತೃತ್ವದಲ್ಲಿ ಶಿವಲಿಂಗಕ್ಕೆ ಸಹಸ್ರ ಬಿಲ್ವಾರ್ಚನೆ, ಅಭಿಷೇಕ, ರುದ್ರ ಪಾರಾಯಣ ನಡೆದವು.
ಅಯ್ಯಪ್ಪ ಸನ್ನಿಧಾನ ಪಟ್ಟ ಣದ ಉಮಾಕಾಂತ ಬಂದೆ ಬಡಾವಣೆ ಯಲ್ಲಿರುವ ಅಯ್ಯಪ್ಪಸ್ವಾಮಿ ಸನ್ನಿಧಾನ ದಲ್ಲಿ ಪ್ರಸಾದ ಸ್ವಾಮಿ, ಮಲ್ಕಪ್ಪ ಅಂಗಡಿ ಹಾಗೂ ರಾಜು ಮಾಲಗತ್ತಿ ನೇತೃತ್ವದಲ್ಲಿ ವಿಶೇಷ ಪೂಜೆ ಜರುಗಿತು.
ಸರತಿಯಲ್ಲಿ ನಿಂತು ದರ್ಶನ
ಸುರಪುರ: ಶಿವರಾತ್ರಿ ಅಂಗವಾಗಿ ನಗರದ ಗೌರಮ್ಮನ ಗುಡಿ, ಬೋಗಾರಗಲ್ಲಿಯ ಈಶ್ವರ ಗುಡಿ, ಕಬಾಡಗೇರಾದ ಈಶ್ವರ ದೇಗುಲ, ರಾಮಕರಣಗಲ್ಲಿಯ ಶಿವ ಮಂದಿರ, ವೆಂಕಟರಮಣನ ಗುಡಿ, ರಂಗಂಪೇಟೆಯ ನಗರೇಶ್ವರ ದೇವಸ್ಥಾನ, ಬನಶಂಕರಿ ಗುಡಿ, ಮಾರ್ಕಂಡೇಶ್ವರ ದೇವಾಲಯಗಳಲ್ಲಿ ಭಕ್ತರ ದಂಡು ಕಂಡು ಬಂತು.
ನಗರದ ಪುರಾತನ ಗೌರಮ್ಮನ ಗುಡಿಯಲ್ಲಿ ಭಕ್ತರ ದೊಡ್ಡ ಸಾಲು ಕಂಡು ಬಂತು,
ಭಕ್ತರನ್ನು ನಿಯಂತ್ರಿಸಲು ಪೊಲೀಸರ ನೆರವು ಪಡೆಯಲಾಯಿತು. ಎಲ್ಲೆಡೆ ಅಹೋರಾತ್ರಿ ಭಜನೆ, ಸಂಗೀತ ಕಾರ್ಯಕ್ರಮ
ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.