ಯಾದಗಿರಿ: ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ಈಸ್ಟರ್ ಆಚರಿಸಲಾಯಿತು.
ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚ್, ತಾತಾ ಸಿಮೆಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಭಾನುವಾರ ಯೇಸು ಕ್ರಿಸ್ತನ ಪುನರುತ್ಥಾನದ ದಿನ ಆಚರಿಸಲಾಯಿತು.
ಯೇಸು ಕ್ರಿಸ್ತನು ಶಿಲುಬೆ ಮೇಲೆ ಸತ್ತು ಮೂರನೇ ದಿನದಲ್ಲಿ ಎದ್ದು ಬಂದ ಪ್ರಯುಕ್ತ ವಿಶೇಷ ಆರಾಧನೆ ಮಾಡಲಾಯಿತು.
ಕೆಲ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತನ ಸಮಾಧಿ ನಿರ್ಮಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಬೆಟ್ಟ ಮತ್ತು ಹೊರವಲಯದಲ್ಲಿ ಬೆಳಗಿನ ಜಾವವೇ ಆರಾಧನೆ ಹಮ್ಮಿಕೊಳ್ಳಲಾಗಿತ್ತು. ಚರ್ಚ್‌ಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದಾರಿ ಮಧ್ಯೆ ಮೆರವಣಿಗೆ ಮೂಲಕ ಯೇಸು ಪುನರುತ್ಥಾನ ಆಗಿದ್ದಾನೆಂದು ಘೋಷಣೆ ಕೂಗುತ್ತಾ ಸಾಗಲಾಯಿತು. ಯೇಸು ಎದ್ದನು ಯೇಸು ಎದ್ದನು ಎಂದು ಜಯಘೋಷ ಕೂಗಲಾಯಿತು.
ಪುನರುತ್ಥಾನ ಹಬ್ಬದ ಅಂಗವಾಗಿ ಭಾನುವಾರ ಬೆಳಿಗ್ಗೆ 9.30ಕ್ಕೆ ನಗರ ಪ್ರದೇಶಗಳಲ್ಲಿ, ಸಂಜೆ ಗ್ರಾಮೀಣ ಪ್ರದೇಶಗಳಲ್ಲಿ ಆರಾಧನೆ ಕೂಟ ಹಮ್ಮಿಕೊಳ್ಳಲಾಗಿತ್ತು.
ಚಿಣ್ಣರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಸಭಾಪಾಲಕರು,‘ಯೇಸು ಕ್ರಿಸ್ತನು ಲೋಕದ ಪಾಪಿಗಳಗೋಸ್ಕರ ಶಿಲುಬೆಯ ಮೇಲೆ ಮರಣ ಹೊಂದಿದರು. ಮೂರನೇ ದಿನದಲ್ಲಿ ಪುನರುತ್ಥಾನ ಹೊಂದಿದನು. ಈ ಕಾರಣಕ್ಕೆ ಹಬ್ಬ ಆಚರಿಸಲಾಗುತ್ತಿದೆ. ಯೇಸು ದೇವರು ಮರಣವನ್ನು ಜಯಿಸಿದ್ದಾರೆ’ ಎಂದರು.
ಕ್ರೈಸ್ತರು ಸತತವಾಗಿ 40 ದಿನಗಳಿಂದ ಉಪವಾಸ ಪ್ರಾರ್ಥನೆ ಮಾಡಿ ಶುಕ್ರವಾರ ಗುಡ್ ಫ್ರೈಡೇ ಆಚರಿಸಿದ್ದರು. ಭಾನುವಾರ ಈಸ್ಟರ್ ಹಬ್ಬವಾಗಿ ಮಾಡಿದರು.
ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚ್‌ನಲ್ಲಿ ರೆವ.ಎಸ್.ಸತ್ಯಮಿತ್ರ, ಸಹಾಯಕ ಸಭಾಪಾಲಕ ರೆವ ಎಸ್.ಯೇಸುನಾಥ ನಂಬಿ ನೇತೃತ್ವದಲ್ಲಿ ವಿಶೇಷ ಕೂಟ ಆಯೋಜಿಸಲಾಗಿತ್ತು.
ತಾತಾ ಸಿಮೆಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್‌ನಲ್ಲಿ ಸಭಾಪಾಲಕ ರೆವ. ಎ.ಸಂಸೋನ್ ಅವರ ನೇತೃತ್ವದಲ್ಲಿ ಆರಾಧನೆ ಕೂಟ ನಡೆಯಿತು.
ಬಾಲಮಿತ್ರ ರೆಬೆಲ್, ದಿಲೀಪ್, ಮನೋರಮಾ, ಸತ್ಯಮಿತ್ರ, ಮೇರಿ, ವಿಜಯಕುಮಾರಿ, ವಿಜಕುಮಾರ್, ಸಂಸೋನ್, ಸುಮಿತ್ರ, ನವೀನ್ ಕುಮಾರ್, ಯೇಸುರಾಜ್, ಎಡ್ವಿನ್, ಬಸವರಾಜ್, ಜಯರಾಜ್, ವಿಜಯರತ್ನ ಕುಮಾರ್, ಸುಂದರಮ್ಮ, ಮರಿಯಪ್ಪ, ಶಾಂತರಾಜ್ ಬೆಳ್ಳಿ, ಪ್ರೀತಮ್ ಮಾರ್ಕ್, ಸುನಾಥ್ ರೆಡ್ಡಿ, ಸುರೇಶ ಸೈಲೇಸ್, ಧನರಾಜ್ ಮಿತ್ರ, ಶಿಬಾ ಜಿಲೇಯನ್, ವಿಕ್ಟೊರಿಯಾ ಅಪ್ಪಿ, ಗಿಡಿಯೋನ್ ಮೋಸಸ್ ಹಾಗೂ ಕಸ್ತೂರಿ ರತ್ನ ಅವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.