ಯಾದಗಿರಿ: ನಗರದ ವಿವಿಧ ಶಾಲಾ ಕಾಲೇಜುಗಳ ಸಮೀಪ ಮತ್ತು ಬಸ್ ನಿಲ್ದಾಣಗಳಲ್ಲಿ ಶ್ರೀರಾಮ ಸೇನೆ ಪ್ರಾರಂಭಿಸಿದ ಲವ್ ಜಿಹಾದ್ ಸಹಾಯವಾಣಿಯ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.
ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ನೀಡಿ ಈ ಬಗ್ಗೆ ಕರಪತ್ರ ನೀಡಿ, ಲವ್ ಜಿಹಾದ್ ಸಹಾಯವಾಣಿ 90904 43444 ಸಂಖ್ಯೆಗೆ ಕರೆ ಮಾಡಿದರೆ ಶ್ರೀರಾಮ ಸೇನೆ ನೆರವಿಗೆ ಬರಲಿದೆ ಎಂದು ಜಾಗೃತಿ ಮೂಡಿಸಿದರು.
ಈಗಾಗಲೇ ರಾಜ್ಯದಾದ್ಯಂತ ಮಹಿಳೆಯರಿಂದ 600 ಕರೆಗಳು ಬಂದಿದ್ದು, ಇದಕ್ಕೆ ಶ್ರೀರಾಮ ಸೇನೆ ಸ್ಪಂದಿಸಿ ಅವರಿಗೆ ಸೂಕ್ತ ನೆರವು ರಕ್ಷಣೆ ಹಾಗೂ ಕಾನೂನು ಮೂಲಕ ಜಿಹಾದಿಗಳ ವಿರುದ್ಧ ಸಮರ ಸಾರಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ಮಹೇಂದ್ರಕರ್, ಸೇನೆಯ ಜಿಲ್ಲಾ ಉಪಾಧ್ಯಕ್ಷ ಅಂಬರೇಶ ತಡಿಬಿಡಿ ಮಾತನಾಡಿ, ನೊಂದ ಮಹಿಳೆಯರು ಅಲ್ಲದೇ ಶ್ರೀರಾಮ ಸೇನೆ ಆರಂಭಿಸಿದ ಸಹಾಯವಾಣಿಗೆ ಜಿಹಾದಿಗಳು ಫೋನ್ ಕರೆ ಮಾಡಿ ಅವಾಚ್ಯ ನಿಂದಿಸುತ್ತಿದ್ದಾರೆ ಎಂದರೆ ಇಂತಹ ಪಾಪಿ ಜಿಹಾದಿಗಳು ಸುತ್ತಮುತ್ತಲೂ ಇದ್ದಾರೆ ಎಂದು ಗೊತ್ತಾಗುತ್ತದೆ. ಆದ್ದರಿಂದ ಜಾಗೃತ ಸ್ಥಿತಿಯಲ್ಲಿರಬೇಕೆಂದು ಅರಿವು ಮೂಡಿಸಿದರು.
ಈ ಕರಪತ್ರ ವಿತರಣೆ ಕಾರ್ಯಕ್ರಮದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ರಘುರಾಮ್, ನಗರ ಉಪಾಧ್ಯಕ್ಷ ವಿಶ್ವನಾಥ ಅಕ್ಕಿ, ಬಸವರಾಜ ಮನಗನಾಳ, ವಿಶ್ವನಾಥ, ಕೋರೇಶ ನಾಯಕ, ರಾಕೇಶ ನಾಯಕ, ಆಕಾಶ ಚವಾಣ್, ಪವನ ನಾಯಕ, ಶಿವ, ವಿನೋದ್, ಸುನಿಲ್, ಮಹೇಶ ಕಟ್ಟಿ, ಸಾಬು ಹುಲಕಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.