ಗುರುಮಠಕಲ್: ಪಟ್ಟಣದ ಕಾಕಲವಾರ ಕ್ರಾಸ್ ವೃತ್ತ, ಬಸವೇಶ್ವರ ವೃತ್ತ(ಗಂಜ್), ಬಸ್ ನಿಲ್ದಾಣದ(ಅಂಬಿಗರ ಚೌಡಯ್ಯ ವೃತ್ತ) ಸಮೀಪ ಬೀದಿ ನಾಯಿಗಳ ಉಪಟಳ ಹೆಚ್ಚಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ಓಡಾಡುವಂತಾಗಿದೆ.
‘ರಾತ್ರಿ ವೇಳೆ ಹೈದರಾಬಾದ್ ನಗರದಿಂದ ಬಸ್ ಮೂಲಕ ಬಂದು, ಮನೆಗೆ ತೆರಳುವಾಗ ಬಸ್ ನಿಲ್ದಾನದಲ್ಲಿದ್ದ ನಾಯಿಗಳ ಹಿಂಡು ಬೊಗಳುತ್ತಾ ಬೆನ್ನಟ್ಟಿದವು. ಅದೃಷ್ಟಕ್ಕೆ ಹಲ್ಲೆ ಮಾಡಲಿಲ್ಲ. ಆದರೆ, ಮನೆಗೆ ತೆರಳುವವರೆಗೂ ಎದೆ ಬಡಿತ ಇಳಿಯಲೇ ಇಲ್ಲ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.
‘ಈಚೆಗೆ ತಿಂಗಳ ಅವಧಿಯಲ್ಲಿ ನಮ್ಮ ತಂದೆಯವರಿಗೆ ನಾಯಿ ಕಚ್ಚಿದ್ದವು. ಇದು ಮುಂದುವರಿದರೆ ಚಿಕ್ಕಮಕ್ಕಳು ಮತ್ತು ಶಾಲಾ ಮಕ್ಕಳ ಸ್ಥಿತಿ ಊಹಿಸಲಾಗದು. ಕೂಡಲೇ ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತ ಹಾಗೂ ಇತರೆ ಸಂಬಂದಿತ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಬೇಕು’ ಎಂದು ದಸಂಸ ಸಂಚಾಲಕ ಲಾಲಪ್ಪ ತಲಾರಿ ಹೇಳಿದರು.
‘ಪ್ರಾಣಿಗಳನ್ನು ಕೊಲ್ಲುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಬೇರೆಡೆ ಸ್ಥಳಾಂತರಿಸುವುದು ವಾಡಿಕೆ. ಉಳಿದಂತೆ ಸಂತಾನ ಹರಣ ಚಿಕಿತ್ಸೆ ಮಾಡುವ ಅವಕಾಶವಿದೆ. ಆದರೆ, ಎಲ್ಲ ಸೌಲಭ್ಯಗಳಿಲ್ಲ ಮತ್ತು ಸಮನ್ವಯ ಕೊರತೆಯಿದೆ. ಅದರಿಂದಾಗಿ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಕಳವಳ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಎಕಾಎಕಿ ಅಡ್ಡಬರುವ ನಾಯಿಗಳಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆ ಸುರಿಯುತ್ತಿರುವುದರಿಂದ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಗಳು ಸಂಭವಿಸುತ್ತಿವೆವೆಂಕಟಪ್ಪ ವಾಹನ ಸವಾರ
ರಾತ್ರಿ ವೇಳೆ ಬೇರೆಡೆಯಿಂದ ಬಸ್‌ನಲ್ಲಿ ಬಂದು ಮನೆಗೆ ತೆರಳುವಾಗ ನಾಯಿಗಳ ಉಪಟಳ ಹೆಚ್ಚಿದೆ. ನಾಯಿಗಳ ಹಿಂಡು ರಸ್ತೆಯಲ್ಲಿ ಎದುರುಗೆ ಬಂದು ಗಟುರು ಹಾಕಿದರೆ ಜೀವ ಹೋದಂತಾಗುತ್ತದೆನಾರಾಯಣ ಹಿರಿಯ ನಾಗರಿಕರು
ನಾಯಿಗಳ ಉಪಟಳ ಮತ್ತೆ ಹೆಚ್ಚಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ? ಸಮಸ್ಯೆ ಉಲ್ಬಣಗೊಳ್ಳುವ ಮುನ್ನವೇ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕುಲಾಲಪ್ಪ ತಲಾರಿ ಡಿಎಸ್ಎಸ್ ಸಂಚಾಲಕ
ವರ್ಷದ ಹಿಂದೆ ಕೇರಳದ ತಜ್ಞರ ನೆರವಿನಿಂದ ನಾಯಿಗಳನ್ನು ಸ್ಥಳಾಂತರಿಸಲಾಗಿತ್ತು. ಮೇಲಧಿಕಾರಿಗಳ ಗಮನಕ್ಕೆ ತಂದು ನಿರ್ದೇಶನದಂತೆ ಕ್ರಮವಹಿಸಲಾಗುವುದುಭಾರತಿ ಸಿ. ದಂಡೋತಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.