ADVERTISEMENT

‘ವಚನಕಾರರಷ್ಟೇ ಅಲ್ಲ, ಸಮಾಜ ಸುಧಾರಕ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 15:44 IST
Last Updated 13 ಏಪ್ರಿಲ್ 2024, 15:44 IST
ಸುರಪುರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು
ಸುರಪುರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು   

ಸುರಪುರ: ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು, ‘12ನೇ ಶತಮಾನಕ್ಕೂ ಮುನ್ನವೇ ಸಮಾಜ ಸುಧಾರಣೆಗಾಗಿ ದೇವರ ದಾಸಿಮಯ್ಯರು ಅತ್ಯುತ್ತಮ ವಚನಗಳನ್ನು ರಚನೆ ಮಾಡಿ ಆದ್ಯ ವಚನಕಾರ ಎನಿಸಿಕೊಂಡಿದ್ದಾರೆ. ಅವರು ಕೇವಲ ವಚನಕಾರರಷ್ಟೇ ಅಲ್ಲ. ಸಮಾಜ ಸುಧಾರಕ’ ಎಂದರು.

ಕಂದಾಯ ಇಲಾಖೆಯ ಶಿರಸ್ತೇದಾರ್ ಗುರುಬಸಪ್ಪ ಪಾಟೀಲ, ಎಸ್‍ಡಿಎ ರವಿನಾಯಕ ಬೆನಕನಹಳ್ಳಿ, ರಂಗಂಪೇಟೆ-ತಿಮ್ಮಾಪುರ ಬನಶಂಕರಿ ದೇವಸ್ಥಾನದ ಅರ್ಚಕ ಲಿಂಗಯ್ಯಸ್ವಾಮಿ ಹಿರೇಮಠ, ದೇವಾಂಗ ಸಮಾಜದ ಮುಖಂಡರಾದ ಶರಣಪ್ಪ ಗುಮ್ಮಾ, ಲಿಂಗಣ್ಣ ರಾಯಚೂರಕರ, ಗಿರಿಮಲ್ಲಪ್ಪ ಕೊಳ್ಳಿ, ಸಿದ್ದಪ್ಪ ಚೆಟ್ಟಿ, ಸಂಗಪ್ಪ ಚೆಟ್ಟಿ, ರವಿ ಗಲಗಿನ್, ಈರಣ್ಣ ನಾಲವಾರ ಇತರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.