ಸುರಪುರ: ‘ಆಸ್ಥಾನ ಕಾಲದಿಂದಲೂ ಈ ಭಾಗ ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಗೆ ಹೆಸರುವಾಸಿ. ಇಲ್ಲಿ ಅನನ್ಯ ರಂಗಭೂಮಿ ಕಲಾವಿದರು, ನಾಟಕ ಸಾಹಿತಿಗಳು ಇದ್ದಾರೆ. ಅವರೆಲ್ಲರಿಗೆ ಪ್ರೋತ್ಸಾಹದ ಅಗತ್ಯ ಇದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಹೇಳಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಕೋನ್ಹಾಳದ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ ಸಗರನಾಡು ಗ್ರಾಮೀಣ ನಾಟಕೋತ್ಸವ-2023 ಅಂಗವಾಗಿ ಆಯೋಜಿಸಿದ್ದ ‘ಮಸಣ ಸೇರಿದ ಮಲ್ಲಿಗೆ ಹೂವು’ ನಾಟಕದ ಉಚಿತ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾಟಕ ಪ್ರದರ್ಶಿಸಲು ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ನಗರದಲ್ಲಿ ರಂಗ ಮಂದಿರದ ಅಗತ್ಯವಿದೆ. ವಿಧಾನಸಭೆ ಚುನಾವಣೆಯ ನಂತರ ಶಾಸಕ ರಾಜೂಗೌಡರ ಮನವೊಲಿಸಿ ರಂಗ ಮಂದಿರ ನಿರ್ಮಾಣ ಮಾಡಿಸಲಾಗುವುದು’
ಎಂದರು.
ಸಾನಿಧ್ಯ ವಹಿಸಿದ್ದ ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಮಾತನಾಡಿದರು.
ಶಂಕರ ನಾಯಕ, ಬಲಭೀಮನಾಯಕ ಭೈರಿಮಡ್ಡಿ, ಶ್ರೀನಿವಾಸನಾಯಕ ದರಬಾರಿ, ಶರಣು ನಾಯಕ ಭೈರಿಮಡ್ಡಿ, ವೆಂಕಟೇಶ ಬೇಟೆಗಾರ, ಶ್ರೀನಿವಾಸ ಜಾಲವಾದಿ, ಶರಣಬಸವ ಯಾಳವಾರ, ಯಲ್ಲಪ್ಪ ಕಾಡ್ಲೂರ, ಮಂಜುನಾಯಕ ಭೈರಿಮಡ್ಡಿ, ನಿಂಗನಗೌಡ ದೇಸಾಯಿ, ಬಸವರಾಜ ಕೊಡೇಕಲ್, ಯಲ್ಲಪ್ಪ ಹುಲಕಲ್, ಶಾಂತಗೌಡ ತಾರನಾಳ, ಮಲ್ಲನಗೌಡ ಯಾಳವಾರ, ಶಾಂತಗೌಡ ದಾನರೆಡ್ಡಿ, ಈರಣ್ಣಗೌಡ ಗುಡಿಮನಿ, ಹನುಮೇಗೌಡ ಶಖಾಪುರ, ಮೌನೇಶ ದಳಪತಿ, ನಾಟಕ ರಚನೆಕಾರ, ನಿರ್ದೇಶಕ ಮಲ್ಲೇಶ ಕೊನ್ಹಾಳ, ವೆಂಕಟೇಶನಾಯಕ ಭೈರಿ ಮಡ್ಡಿ, ನಿಂಗಪ್ಪನಾಯಕ ಬಿಜಾಸಪುರ ಇದ್ದರು,
ರಂಗಕರ್ಮಿಗಳಾದ ಭೀಮಾಶಂಕರ ಹಲಕರ್ಟಿ, ಕೃಷ್ಣಾ ಹೀರಾಪುರ, ಸಿದ್ದಣ್ಣ ಶಾರದಳ್ಳಿ, ಮಲ್ಲು ಹಲಕರ್ಟಿ, ವೆಂಕಟೇಶನಾಯಕ ಭೈರಿಮಡ್ಡಿ, ದವಲಸಾಬ ಚಿಕ್ಕನಳ್ಳಿ, ಯಲ್ಲಪ್ಪ ತಳವಾರಗೇರಾ, ನಿಂಗಪ್ಪನಾಯಕ ಬಿಜಾಸಪುರ, ಮೂರ್ತಿ ಬೊಮ್ಮನಳ್ಳಿ, ರವಿನಾಯಕ ಭೈರಿಮಡ್ಡಿ, ದೇವಿಂದ್ರಪ್ಪ ಬಾದ್ಯಾಪುರ, ಶಿವುಮಾನಯ್ಯ ವಾಗಣಗೇರಾ ಅವರಿಗೆ ‘ಸಗರನಾಡು ಸಿರಿ’ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭೀಮಾಶಂಕರ ಹಲಕರ್ಟಿ ಅವರ ಖಳನಾಯಕನ ಪಾತ್ರ, ಕೃಷ್ಣ ಹೀರಾಪುರ ಅವರ ತೃತೀಯ ಲಿಂಗಿ ಪಾತ್ರ, ಮುತ್ತು ಬಳಗಾನೂರ ಅವರ ನಾಯಕ ನಟನ ಪಾತ್ರ ಜನಮನ ಸೂರೆಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.