ADVERTISEMENT

ಶರಣಗೌಡ ‘ಫೋನ್‌–ಇನ್’ ಸ್ಪಂದನೆ

ಮತಕ್ಷೇತ್ರದ ಜನರ ಜನರ ಸಮಸ್ಯೆ ಆಲಿಸಿದ ಜೆಡಿಎಸ್‌ ಯುವ ಮುಖಂಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 16:10 IST
Last Updated 23 ಏಪ್ರಿಲ್ 2020, 16:10 IST
ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಫೋನ್‌ಇನ್‌ ಕಾರ್ಯಕ್ರಮ
ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಫೋನ್‌ಇನ್‌ ಕಾರ್ಯಕ್ರಮ   

ಯಾದಗಿರಿ: ಲಾಕ್‍ಡೌನ್ ಪ್ರಯುಕ್ತ ಮತಕ್ಷೇತ್ರದ ಜನರ ಜನರ ಸಮಸ್ಯೆ ಆಲಿಸಲು ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ನೇತೃತ್ವದಲ್ಲಿ ಗುರುವಾರ ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಸುಮಾರು 67 ಕರೆಗಳನ್ನು ಸ್ವೀಕರಿಸಿದರು.

ರೈತರು ತಾವು ಬೆಳೆದ ಬೆಳೆ ಮಾರಾಟವಾಗದಿರುವ ಕುರಿತು, ಭತ್ತ, ಕಬ್ಬು, ಕಲ್ಲಂಗಡಿ, ಟೊಮೆಟೊ ಮತ್ತು ಬಾಳೆ ಬೆಳೆಗಳು ಅಕಾಲಿಕ ಮಳೆಯಿಂದ ನಾಶವಾಗಿರುವ ಬಗ್ಗೆ, ದಿನಸಿ ಪದಾರ್ಥಗಳು ದೊರೆಯದ ಕುರಿತು, ಬೆಳೆ ಹಾನಿ ಪರಿಹಾರ ಒದಗಿಸುವ ಕುರಿತು ಹಾಗೂ ನೀರಿನ ಅಲಭ್ಯತೆಯ ಸಮಸ್ಯೆ ಕುರಿತು ಹೇಳಿಕೊಂಡರು.

ಮನೆಮನೆಗೆ ದಿನಸಿ, ಅಗತ್ಯ ವಸ್ತುಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಶರಣಗೌಡ ಭರವಸೆ ನೀಡಿದರು.

ADVERTISEMENT

ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ ನಗರಗಳಿಂದ ಸ್ವಗ್ರಾಮಕ್ಕೆ ಮರಳಿ ಬಂದಿರುವ ಕೆಲವರು ಉದ್ಯೋಗ ಒದಗಿಸುವಂತೆ ಕೋರಿದರು. ವಲಸಿಗರನ್ನು ಸ್ವಗ್ರಾಮಕ್ಕೆ ಕರೆಯಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂತು. ಕೆಲವರು ಮದ್ಯಕ್ಕಾಗಿ ಬೇಡಿಕೆ ಇಟ್ಟರು!

ಎಲ್ಲ ಸಮಸ್ಯೆಗಳನ್ನು ಆಲಿಸಿದ ಕಂದಕೂರ, ಶೀಘ್ರದಲ್ಲೇ ವೈಯುಕ್ತಿಕವಾಗಿ ಕೆಲವೊಂದು ಸಮಸ್ಯೆಗಳು ಬಗೆಹರಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿ ಉಳಿದ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.