ಯಾದಗಿರಿ: ಭೂ ದಾಖಲೆ ಇಲಾಖೆಯ ಸಿಬ್ಬಂದಿ ರೈತನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಬಲೆಗೆ ಕೆಡವಿದ್ದಾರೆ.
ಗುರುಮಠಕಲ್ ತಾಲ್ಲೂಕು ಭೂ ದಾಖಲೆ ಸೂಪರ್‌ವೈಸರ್ ಶೇಷಪಾಲರೆಡ್ಡಿ, ಯಾದಗಿರಿ ಭೂ ದಾಖಲೆ ಕಚೇರಿ ಜವಾನ ಶರಣು ಲೋಕಾಯುಕ್ತ ಬಲೆಗೆ ಬಿದ್ದವರು.
ರೈತ ಮಹೇಂದ್ರ ಈರಪ್ಪ ಪೂಜಾರಿ ಎಲ್ಹೇರಿ ದೂರು ಕೊಟ್ಟಿದ್ದರು.
ಜಮೀನಿನ ಟಿಪ್ಪಣಿ ತಿದ್ದುಪಡಿ ಸಂಬಂಧ ರೈತನಿಂದ ₹ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಹಾಗೂ ಸಿಬ್ಬಂದಿ, ಮುಂಗಡವಾಗಿ ₹10 ಸಾವಿರ ಹಣ ಪಡೆದಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಅಬ್ದುಲ್ ರೌಫ್ ಕರ್ನೂಲ್ ಮಾರ್ಗದರ್ಶನದಲ್ಲಿ ಪಿಐ ಅರುಣ ಕುಮಾರ್, ಹಣಮಂತ ಸಣ್ಣಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.
‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಲೋಕಾಯುಕ್ತ ಎಸ್‌ಪಿ ಅಬ್ದುಲ್ ರೌಫ್ ಕರ್ನೂಲ್, ‘ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅಗತ್ಯವೆಸಿದರೆ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.