ಯಾದಗಿರಿ: ನಗರ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣ ತನಿಖೆಗೆ ಭಾನುವಾರ ಸಿಐಡಿ ತಂಡ ನಗರಕ್ಕೆ ಆಗಮಿಸಿದೆ.
ತನಿಖೆ ನಡೆಸಲು ಸಿಡಿಐ ಡಿವೈಎಸ್ಪಿ ಪುನೀತ್ ಅವರ ತಂಡ ಆಗಮಿಸಿದೆ.
ಎರಡು ಕಾರುಗಳಲ್ಲಿ ಆಗಮಿಸಿರುವ ತಂಡ,
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಾಹಿತಿ ಪಡೆಯುತ್ತಿದೆ.
ಸಿಪಿಐ ಸುನಿಲ್ ಮೂಲಿಮನಿ, ಗ್ರಾಮೀಣ ಠಾಣೆ ಪಿಎಸ್ಐ ಹಣಮಂತ ಬಂಕಲಗಿ ಜೊತೆಗಿದ್ದಾರೆ.
ಪಿಎಸ್ಐ ಪರಶುರಾಮ್ ಸಾವಿಗೆ ಸಂಬಂಧಿಸಿದಂತೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಎಸ್ ಐ ಪರಶುರಾಮ್ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಶನಿವಾರ ಸಂಜೆ ಸಿಐಡಿಗೆ ವಹಿಸಿದೆ.
ಸಿಐಡಿ ತನಿಖೆಗೆ ನೀಡಿದ ಒಂದೇ ದಿನದಲ್ಲಿ ಯಾದಗಿರಿ ನಗರಕ್ಕೆ ತನಿಖಾ ತಂಡ ಆಗಮಿಸಿದೆ.
ಯಾದಗಿರಿ ನಗರ ಪೊಲೀಸರಿಂದ ಪ್ರಕರಣದ ಫೈಲ್ ಸಿಐಡಿ ತಂಡ ಪಡೆಯಲಿದೆ.
ಎಫ್ಐ ಆರ್ ಪ್ರತಿ, ಪಂಚನಾಮೆ ವರದಿ ಸೇರಿದಂತೆ ವಿವಿಧ ಆಯಾಮಗಳ ಮಾಹಿತಿಯನ್ನು ತಂಡ ಪಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.