ADVERTISEMENT

‘ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿರಂತರ’ 

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:07 IST
Last Updated 21 ನವೆಂಬರ್ 2024, 16:07 IST
ಹುಣಸಗಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ   ಮಾತನಾಡಿದರು
ಹುಣಸಗಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ   ಮಾತನಾಡಿದರು   

ಹುಣಸಗಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರದಿಂದ ಸವಲತ್ತುಗಳು ಇಲ್ಲಿಯವರೆಗೂ ಯಾವುದೇ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ಆದ್ದರಿಂದ ಮುಂದಿನ ಭವಿಷ್ಯಕ್ಕಾಗಿ  ಹೋರಾಟ ಅನಿವಾರ್ಯ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಬಳಿಕ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ನಂಬಿಕೆ ಇತ್ತು. ಆದರೆ ಇಲ್ಲಿಯವರೆಗೂ ನಮ್ಮನ್ನು ಹಾಗೂ ಮುಖಂಡರನ್ನು ಕರೆದು ಸಭೆ ನಡೆಸಿಲ್ಲ. ಆದರೆ ಬೇರೆ ಸಮಾಜದ ಸಭೆ ನಡೆಸಿ ಅವರ ಸಮಸ್ಯೆಯನ್ನು ಆಲಿಸಿದ್ದಾರೆ. ಈ ಇಬ್ಬಗೆಯ ನೀತಿ ನೋವು ತಂದಿದೆ. ಆದ್ದರಿಂದ ನಮ್ಮ ಹಕ್ಕೊತ್ತಾಯಕ್ಕಾಗಿ ಹೋರಾಟ ನಡೆಸಲಾಗುತ್ತಿದೆ  ಎಂದು ಹೇಳಿದರು.

ADVERTISEMENT

‘2ಎ ಮೀಸಲಾತಿ ಸೌಲಭ್ಯಕ್ಕಾಗಿ ಡಿಸೆಂಬರ್ 10ರಂದು ಟ್ರ್ಯಾಕ್ಟರ್‌ಗಳ ಮೂಲಕ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಹಳ್ಳಿಗಳಿಂದಲೂ ಅಸಂಖ್ಯಾತ ಬಂಧುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ವಕೀಲರು, ಈ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಗೂ 5 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಬೆಳಗಾವಿಯತ್ತ ಬರಲಿವೆ’ ಎಂದರು.

ಮುಖ್ಯಮಂತ್ರಿಗಳು ಮೀಸಲಾತಿ ಕುರಿತು ಸ್ಪಷ್ಟ ಭರವಸೆ ಕೊಡುವವರೆಗೆ ಈ ಹೋರಾಟ ನಿರಂತರ ಮುಂದುವರಿಯಲಿದೆ. ಸಮಾಜದ ಎಲ್ಲರೂ ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಭೆಯಲ್ಲಿ ಹಿರಿಯರಾದ ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಮಲಗಲದಿನ್ನಿ, ವಿರೇಶ ಚಿಂಚೋಳಿ, ಚಂದ್ರಶೇಖರ ದಂಡಿನ್, ಚನ್ನಯ್ಯಸ್ವಾಮಿ ಹಿರೇಮಠ, ಬಿ.ಎಲ್.ಹಿರೇಮಠ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಬಸಣ್ಣ ದೇಸಾಯಿ, ಮಹಾಂತೇಶ ಮಲಗಲದಿನ್ನಿ, ಬಾಪುಗೌಡ ಪಾಟೀಲ, ಮುರಿಗೆಣ್ಣ ದೇಸಾಯಿ ಮೋಹನ್ ಪಾಟೀಲ್ ಕೊಡೇಕಲ್ಲ, ಅರುಣಕುಮಾರ ಹಗರಟಗಿ, ಬಸವರಾಜ ಪಡಶೆಟ್ಟಿ, ಮಲ್ಲಣ್ಣ ಬ್ಯಾಕೋಡ, ಬಸವರಾಜ ವೈಲಿ, ಬಸವರಾಜ ಸೇವಟಿ, ಸಂಗನಬಸಪ್ಪ ಗೋಗಿ, ಹೊನ್ನಪ್ಪಗೌಡ ಮೇಟಿ, ರುದ್ರು ದೇಸಾಯಿ, ಭೀಮನಗೌಡ ಮಲ್ಕಾಪೂರ, ವಿ.ಎಸ್. ಚಂಗಳಿ, ಮಂಜುನಾಥ್ ನೂಲಿನ್ ಸೇರಿ ಸಮುದಾಯದ ಮುಖಂಡರು ಹಾಜರಿದ್ದರು.

ಬಳಿಕ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ವೃತ್ತದಲ್ಲಿ ಟ್ರಾಕ್ಟರ್‌ ಗೆ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಲಾಯಿತು.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.