ADVERTISEMENT

ಕಳವು ಪ್ರಕರಣ: ದೂರು ದಾಖಲಿಸಿಕೊಳ್ಳದ ಪೊಲೀಸರು; ಆರೋಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:02 IST
Last Updated 23 ಅಕ್ಟೋಬರ್ 2024, 16:02 IST
ಶಹಾಪುರ ನಗರದ ಶಹಾಪುರ -ಸುರಪುರ ಹೆದ್ದಾರಿ ಪಕ್ಕದಲ್ಲಿರುವ ಕಳವು ಆಗಿರುವ ಮಳಿಗೆ
ಶಹಾಪುರ ನಗರದ ಶಹಾಪುರ -ಸುರಪುರ ಹೆದ್ದಾರಿ ಪಕ್ಕದಲ್ಲಿರುವ ಕಳವು ಆಗಿರುವ ಮಳಿಗೆ   

ಶಹಾಪುರ: ‘ನಗರದ ಶಹಾಪುರ-ಸುರಪುರ ಹೆದ್ದಾರಿ ಪಕ್ಕದಲ್ಲಿರುವ ಖಾಸಗಿ ಮಳಿಗೆ ಮೇಲಿನ ಟಿನ್ ಶೆಡ್ ಕತ್ತರಿಸಿ ಬುಧವಾರ ₹22ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಮಳಿಗೆ ಕಳವು ಆದ ಬಗ್ಗೆ ಶಹಾಪುರ ಠಾಣೆಗೆ ದೂರು ಸಲ್ಲಿಸಲು ತೆರಳಿದರೆ ಪೊಲೀಸರು ವಾಪಸ್ಸು ಕಳುಹಿಸಿದ್ದಾರೆ’ ಎಂದು ಖಾಸಗಿ ಮಳಿಗೆಯ ಮಾಲೀಕ ಮಹ್ಮದ್ ಇಲಾಯಾಸ್ ಹುಸೇನಿ ಆರೋಪಿಸಿದ್ದಾರೆ.‌

ಕಳವು ಆದ ಬಗ್ಗೆ ಭಾವಚಿತ್ರ ಹಾಗೂ ದೂರಿನ ಪ್ರತಿಯನ್ನು ನೀಡಿ ಆರೋಪಿಸಿದ ಅವರು, ‘ಎಂದಿನಂತೆ ಬುಧವಾರ ಬೆಳಿಗ್ಗೆ ಮಳಿಗೆ ತೆರೆಯಲು ಹೋದಾಗ ಮಳಿಗೆಯ ಮೇಲಿನ ಛಾವಣಿಯ ಟಿನ್ ಶೆಡ್ ಕತ್ತರಿಸಿ ಅದರ ಮೂಲಕ ಇಳಿದು ಬೆಲೆ ಬಾಳುವ ಮಸಾಲೆ ಸಾಂಬರ ಸಾಮಗ್ರಿಯ ಸುಮಾರು ₹22ಲಕ್ಷ ಮೌಲ್ಯದ ವಸ್ತುಗಳನ್ನು ಸಿಸಿ ಟಿವಿ ಯಂತ್ರ, ₹45ಸಾವಿರ ನಗದು ಹಾಗೂ ಚೆಕ್ ಪುಸ್ತಕವನ್ನು ಕಳವು ಮಾಡಿಕೊಂಡು ತೆರಳಿದ್ದಾರೆ. ಇದರ ಬಗ್ಗೆ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ಇಲ್ಲದ ಸಬೂಬು ಹೇಳಿ ವಾಪಸ್ಸು ಕಳುಹಿಸಿದ್ದಾರೆ’ ಎಂದು ಅವರು ಅಳಲು ತೊಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT