ADVERTISEMENT

 ತಿಂಥಣಿ ಪಂಚಾಯತಿಗೆ ಬೀಗ ಹಾಕಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 11:24 IST
Last Updated 1 ಸೆಪ್ಟೆಂಬರ್ 2022, 11:24 IST
01ಕೆಕೆಆರ್01: ತಿಂಥಣಿ ಗ್ರಾಪಂ ಆಡಳಿತ ಮಂಡಳಿ ವಿರುದ್ದ ಆಕ್ರೋಶವ್ಯಕ್ತಪಡಿಸಿ ಕಛೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಮಾಡಿದ ಕಾಂಗ್ರೇಸ್ ಬೆಂಬಲಿತ ಗ್ರಾಪಂ ಸದಸ್ಯರು ಊಟ ಮಾಡುತ್ತಿರುವುದು.
01ಕೆಕೆಆರ್01: ತಿಂಥಣಿ ಗ್ರಾಪಂ ಆಡಳಿತ ಮಂಡಳಿ ವಿರುದ್ದ ಆಕ್ರೋಶವ್ಯಕ್ತಪಡಿಸಿ ಕಛೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಮಾಡಿದ ಕಾಂಗ್ರೇಸ್ ಬೆಂಬಲಿತ ಗ್ರಾಪಂ ಸದಸ್ಯರು ಊಟ ಮಾಡುತ್ತಿರುವುದು.   

ಕಕ್ಕೇರಾ: ಗ್ರಾಮದಲ್ಲಿ ಕುಡಿಯುವ ನೀರು, ಸಾರ್ವಜನಿಕರ ಕಾರ್ಯಗಳು ಸಕಾಲದಲ್ಲಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿತಿಂಥಣಿ ಗ್ರಾಮ ಪಂಚಾಯಿತಿಸದಸ್ಯರುಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸದಸ್ಯ ಭೈರಣ್ಣ ಅಂಬಿಗರ ಮಾತನಾಡಿ,ಗ್ರಾಮದಲ್ಲಿ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಸರಿಪಡಿಸುವ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷ, ಹಾಗೂ ಉದ್ಯೋಗಖಾತ್ರಿ ಜೆಇ ಇವರೆಲ್ಲರೂ ಮನೆಯಲ್ಲಿ ಕುಳಿತು ಕೆಲಸವನ್ನು ಮಾಡುತ್ತಿದ್ದಾರೆ.ಹೀಗಾಗಿ, ಗ್ರಾಮ ಪಂಚಾಯಿತಿ ಸದಸ್ಯರು ಬೆಳಿಗ್ಗೆ 10.30ರಿಂದ ಸಂಜೆ 4ಗಂಟೆವರೆಗೆ ಕಾರ್ಯಾಲಯಕ್ಕೆ ಬೀಗ ಹಾಕಿದರೂಯಾವ ಅಧಿಕಾರಿಗಳು ಆಗಮಿಸಿಲ್ಲ.

ಪ್ರತಿಭಟನೆನಾಳೆಯೂಮುಂದುವರೆಯುವ ಸಾಧ್ಯತೆಯಿದ್ದು, ಕೂಡಲೇ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಕೆಲಸಗಳು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಬೇವಿನಾಳ, ಶರಣು ಶಾಂತಪುರ, ಸಲಿಂಸಾಬ ಕಂಬಾರ, ಮಾರುತಿ ಬೂದಗುಂಪಿ, ಭೀಮು ರಾಯಗೇರಿ, ಮಂಜು ಬೂದಗುಂಪಿ, ರಂಗನಾಥ ನಾಯಕ, ಗುರು ಸಾಹುಕಾರ, ಬಾಬು ಹವಾಲ್ದಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.