ADVERTISEMENT

ಟೊಮೆಟೊ, ಬೆಳ್ಳುಳ್ಳಿ ದರ ಮತ್ತೆ ಹೆಚ್ಚಳ

ಮಳೆಗಾಲದಲ್ಲಿ ಸೊಪ್ಪುಗಳ ದರ ಏರಿಕೆ: ಕೆಲ ತರಕಾರಿ ಬೆಲೆ ಯಥಾಸ್ಥಿತಿ

ಬಿ.ಜಿ.ಪ್ರವೀಣಕುಮಾರ
Published 30 ಜೂನ್ 2024, 7:02 IST
Last Updated 30 ಜೂನ್ 2024, 7:02 IST
ಯಾದಗಿರಿ ನಗರದ ರೈಲು ನಿಲ್ದಾಣ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್‌
ಯಾದಗಿರಿ ನಗರದ ರೈಲು ನಿಲ್ದಾಣ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್‌   

ಯಾದಗಿರಿ: ಕೆಲ ತಿಂಗಳುಗಳಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಟೊಮೆಟೊ ಮತ್ತು ಬೆಳ್ಳುಳ್ಳಿ ದರ ಮತ್ತೆ ಏರಿಕೆಯಾಗಿದೆ.

ಕಳೆದ ವರ್ಷ ಪೂರ್ತಿ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದ ಹಸಿ ಶುಂಠಿ, ಬೆಳ್ಳುಳ್ಳಿ ದರ 20 ದಿನಗಳ ಹಿಂದೆ ಇಳಿಕೆ ಕಂಡಿತ್ತು. ಆದರೆ, ಈಗ ಮತ್ತೆ ಏರಿಕೆ ಕಂಡಿದೆ. ಬೇಸಿಗೆಯಲ್ಲಿ ಕೆಜಿಗೆ ₹40ರೊಳಗೆ ಇದ್ದ ಟೊಮೆಟೊ ಬೆಲೆ ಈಗ ಮತ್ತೆ ಹೆಚ್ಚಳವಾಗಿದೆ.

ಇದರ ಜೊತೆಗೆ ಬೀನ್ಸ್‌ ಬೆಲೆಯೂ ದ್ವಿಶತಕ ಬಾರಿಸಿದೆ. ಬೆಳ್ಳುಳ್ಳಿ ನಂತರ ಬೀನ್ಸ್‌ ಅತಿ ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ.

ADVERTISEMENT

ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ ₹250, ಬೀನ್ಸ್ ₹200, ಹಸಿ ಶುಂಠಿ ₹160, ಬದನೆಕಾಯಿ ₹120ಕ್ಕೆ ಮಾರಾಟವಾಗುತ್ತಿದೆ.

ಇನ್ನುಳಿದಂತೆ ಕೆಲ ತರಕಾರಿಗಳು ಮಾತ್ರ ಕಳೆದ ಒಂದು ತಿಂಗಳಿನಿಂದ ಒಂದೇ ದರ ಕಾಪಾಡಿಕೊಂಡಿವೆ.

‘ತರಕಾರಿಗಳನ್ನು ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳುವ ಕಾರಣ ಕೆಲ ತರಕಾರಿ ಬೆಲೆ ಸಹಜವಾಗಿಯೇ ಹೆಚ್ಚಳವಾಗಿದೆ. ಸ್ಥಳೀಯವಾಗಿ ಸಿಗುವ ತರಕಾರಿ ಬೆಲೆ ಹೆಚ್ಚಿಸಿಲ್ಲ’ ಎಂದು ವ್ಯಾಪಾರಿ ಯಶೋಧಮ್ಮ ತಿಳಿಸಿದರು.

ಸೊಪ್ಪುಗಳ ದರ: ಮಳೆಗಾಲವಾದ್ದರಿಂದ ಸೊಪ್ಪುಗಳ ದರದಲ್ಲಿ ಏರಿಕೆಯಾಗಿದೆ. ಮೆಂತ್ಯೆ, ಸಬ್ಬಸಗಿ ಸೊಪ್ಪು, ಪುದೀನಾ, ಕೊತ್ತಂಬರಿ ₹20ಕ್ಕೆ ದೊಡ್ಡ ಕಟ್ಟು ಮಾರಾಟ ಮಾಡಲಾಗುತ್ತಿದೆ. ಪಾಲಕ್‌, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹10ಕ್ಕೆ ಒಂದು ₹20ಕ್ಕೆ ಮೂರು ಕಟ್ಟು ನೀಡಲಾಗುತ್ತಿದೆ.

‘ಮನೆ ಮನೆಗೆ ಪುಟ್ಟಿ ತೆಗೆದುಕೊಂಡು ಬರುವ ಮಹಿಳೆಯರು ಸೊಪ್ಪುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕಾರಣ ಗೃಹಣಿಯರು ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ನಾಗಮ್ಮ ರಮೇಶ ಹೇಳುತ್ತಾರೆ. 

ಮಹ್ಮದ್ ರಿಯಾನ್
ಶರಣಬಸಪ್ಪ ಬಳಿಚಕ್ರ 

ಕೆಲ ದಿನಗಳಿಂದ ಇಳಿಕೆಯಾಗಿದ್ದ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ಗ್ರಾಹಕರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ

-ಮಹ್ಮದ್ ರಿಯಾನ್ ತರಕಾರಿ ವ್ಯಾಪಾರಿ

ಪ್ರತಿ ಅಡುಗೆಯಲ್ಲೂ ಬಳಸುವ ಟೊಮೆಟೊ ದರ ಹೆಚ್ಚಳ ಕಂಡಿದ್ದು ಗ್ರಾಹಕರು ಚೌಕಾಶಿಗೆ ಇಳುಯುವಂತೆ ಆಗಿದೆ. ಆದರೂ ವ್ಯಾಪಾರಿಗಳು ಕಡಿಮೆ ಮಾಡುತ್ತಿಲ್ಲ

-ಶರಣಬಸಪ್ಪ ಬಳಿಚಕ್ರ ಗ್ರಾಹಕ

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)ಟೊಮೆಟೊ;60–70ಬೀನ್ಸ್;190–200ಹಸಿ ಮೆಣಸಿನಕಾಯಿ;70-80ಹಸಿ ಶುಂಠಿ;150;160ಬೆಳ್ಳುಳ್ಳಿ;240;250ನುಗ್ಗೆಕಾಯಿ;60–70ಆಲೂಗಡ್ಡೆ;40–50ಈರುಳ್ಳಿ;40–50ಬದನೆಕಾಯಿ;100–120ಬೆಂಡೆಕಾಯಿ;70–80ದೊಣ್ಣೆಮೆಣಸಿನಕಾಯಿ;70–80ಎಲೆಕೋಸು;50–60ಹೂಕೋಸು;70–80ಚವಳೆಕಾಯಿ;70–80ಗಜ್ಜರಿ;60-70ಸೌತೆಕಾಯಿ;70–80ಮೂಲಂಗಿ;60-70ಸೋರೆಕಾಯಿ;50–60ಬೀಟ್‌ರೂಟ್;60-70ಗೀಚು ಹೀರೆಕಾಯಿ;70-80ತುಪ್ಪದ ಹೀರೆಕಾಯಿ;70–80ಹಾಗಲಕಾಯಿ;70-80ಅವರೆಕಾಯಿ;70–80ತೊಂಡೆಕಾಯಿ;60;70

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.