ADVERTISEMENT

ಪ್ರಿಯಾಂಕ್ ಎಷ್ಟು ಹಳ್ಳಿಗಳಲ್ಲಿ ಮಲಗಿದ್ದಾನೆ?: ಉಮೇಶ ಜಾಧವ ವಾಗ್ದಾಳಿ

ಚಿಂಚೊಳಿ ನನ್ನ ಜನ್ಮಸ್ಥಾನ, ಪಾಕಿಸ್ತಾನವಲ್ಲ: ಡಾ.ಜಾಧವ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:24 IST
Last Updated 11 ಏಪ್ರಿಲ್ 2024, 15:24 IST
ಗುರುಮಠಕಲ್ ತಾಲ್ಲೂಕಿನ ಬೋರಬಂಡಾದಲ್ಲಿ ಬಂಜಾರ ಸಮಾಜದ ಮುಖಂಡರನ್ನು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಭೇಟಿಯಾಗಿ ಬೆಂಬಲ ಕೋರಿದರು
ಗುರುಮಠಕಲ್ ತಾಲ್ಲೂಕಿನ ಬೋರಬಂಡಾದಲ್ಲಿ ಬಂಜಾರ ಸಮಾಜದ ಮುಖಂಡರನ್ನು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಭೇಟಿಯಾಗಿ ಬೆಂಬಲ ಕೋರಿದರು   

ಗುರುಮಠಕಲ್: ‘ಕಾಂಗ್ರೆಸ್‌ನವರು ನನ್ನನ್ನು ಚಿಂಚೊಳಿ ಸಂಸದ ಎನ್ನುತ್ತಾರೆ. ಚಿಂಚೊಳಿ ನನ್ನ ಜನ್ಮಸ್ಥಾನ, ಕರ್ಮಭೂಮಿ. ಅದೂ ಕಲಬುರಗಿ ಕ್ಷೇತ್ರದಲ್ಲೇ ಇದೆ ಅಲ್ಲವೇ? ಪಾಕಿಸ್ತಾನದಲ್ಲಿದೆಯೇ?’ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.

ಬೋರಬಂಡಾ ಗ್ರಾಮದಲ್ಲಿ ಈಚೆಗೆ ಬಂಜಾರ ಸಮಾಜದ ಮುಖಂಡರ ಸಭೆ ನಡೆಸಿ, ಬೆಂಬಲ ಕೋರಿ ಮಾತನಾಡಿದ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದುರು.

‘ಪ್ರಿಯಾಂಕ್ ಎಷ್ಟು ಹಳ್ಳಿಗಳಲ್ಲಿ ಮಲಗಿದ್ದಾನೆ? ಹೇಳಲಿ. ನಾನು ಗ್ರಾಮೀಣ ಜನತೆಯ ಸಮಸ್ಯೆಗಳ ಕುರಿತು ಹಳ್ಳಿಗಳಲ್ಲೇ ವಾಸ್ತವ್ಯ ಮಾಡಿ ಅರಿತಿದ್ದೇನೆ. ಪರಿಹಾರಕ್ಕೆ ಪ್ರಾಮಾಣಿಕ ಕೆಲಸ ಮಾಡಿರುವೆ. ಪ್ರಿಯಾಂಕ್ ಖರ್ಗೆಗೆ ನಾಲಿಗೆ ಮೇಲೆ ಹಿಡಿತವಿಲ್ಲ’ ಎಂದು ಆಕ್ರೋಶಗೊಂಡರು.

ADVERTISEMENT

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಖರ್ಗೆ ಮನಸ್ಸು ಮಾಡಿದರೆ ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬಹುದಿತ್ತು. ‌ಕುರಿತು ನಾನು ನಾಲ್ಕು ಸಲ ಪ್ರಶ್ನಿಸಿದ್ದೇನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರದಿಂದ ಲಿಖಿತ ಉತ್ತರವನ್ನೂ ಪಡೆದಿರುವೆ. ಬೇಡಿಕೆ ಸದ್ಯ ಪರಿಶೀಲನಾ ಹಂತದಲ್ಲಿದೆ. ಕೋಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಶ್ವಾಸದೆ ಎಂದು ಭರವಸೆ ನೀಡಿದರು.

ಮೊದಲು ಬಿಜೆಪಿ ಸೇರಿದ್ದು ಬಾಬುರಾವ ಚಿಂಚನಸೂರ, ನಂತರ ನಾನು. ಆದರೆ, ಹೋದಲ್ಲೇಲ್ಲಾ ‘ಉಮೇಶ ಜಾಧವ್ ನನ್ನನ್ನು ಬಿಜೆಪಿಗೆ ಕರೆತಂದು ಮೋಸ ಮಾಡಿದ’ ಎಂದು ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ಉತ್ತಸ್ಪಂಧನೆ ಸಿಕ್ಕಿದೆ’ ಎಂದು ಹೇಳಿದರು.

ಮುಖಂಡರಾದ ನರೇಂದ್ರ ರಾಠೋಡ, ರಮೇಶ ಪವಾರ್, ಕಾಶಿನಾಥ, ವಿಜಯಕುಮಾರ, ಸುರೇಶ ರಾಠೋಡ, ಪತ್ತು ನಾಯಕ, ಕಿಶನ ರಾಠೋಡ, ರಮೇಶ ರಾಠೋಡ ಸೇರಿದಂತೆ ಬಂಜಾರ ಸಮಾಜದ ಮುಖಂಡರು ಉಪಸ್ಥಿತದ್ದರು.

ಖರ್ಗೆ ಕುಟುಂಬದಲ್ಲೇ ಅಧಿಕಾರ ಉಳಿಯಬೇಕೆ?:

ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭಾ ಸದಸ್ಯರು, ಪ್ರಿಯಾಂಕ್ ಖರ್ಗೆ ಸಚಿವ. ಈಗ ಅವರ ಮಾವ ರಾಧಾಕೃಷ್ಣ ಅವರನ್ನು ಸಂಸದರನ್ನಾಗಿ ಮಾಡಬೇಕು ಎಂದು  ನೋಡುತ್ತಿದ್ದಾರೆ. ಎಲ್ಲಾ ಅಧಿಕಾರ ಪ್ರಿಯಾಂಕ್ ಖರ್ಗೆ ಮನೆಯಲ್ಲೇ ಉಳಿಯಬೇಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.