ಶಹಾಪುರ: ಅನಧಿಕೃತ ಕೋಚಿಂಗ್ ಕೇಂದ್ರಗಳು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿವೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚಿಸಿದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ.
ನಗರದಲ್ಲಿ ಅನಧಿಕೃತ ಕೋಚಿಂಗ್(ತರಬೇತಿ) ಕೇಂದ್ರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದಾಖಲೆ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಅವರು ಗುರುವಾರ ಶಹಾಪುರ ಠಾಣೆಗೆ ದೂರು ಸಲ್ಲಿಸಿದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ದೂರು ನೀಡಲು ತೆರಳಿದ ಅಧಿಕಾರಿಗೆ ಪೊಲೀಸರು ಸಬೂಬು ಹೇಳಿ ವಾಪಸ್ಸು ಕಳುಹಿಸಿದ್ದಾರೆ. ಪೊಲೀಸರ ಈ ನಡೆ ಅನುಮಾನ ಹೆಚ್ಚಿಸಿದೆ.
ನಗರದಲ್ಲಿರುವ ಅನಧಿಕೃತವಾಗಿ ನಡೆಸುತ್ತಿರುವ ವಿದ್ಯಾದೀಪ ಕೋಚಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮುಚ್ಚಲು ಆದೇಶಿಸಲಾಗಿತ್ತು. ಆದರೆ ಕೇಂದ್ರವನ್ನು ಮುಚ್ಚಿ, ಅದರ ಬದಲಾಗಿ ಶ್ರೀ ಕಾಯಕ ಕಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಎನ್‌ಜಿಒ ಕಾಲೊನಿಯಲ್ಲಿ ಮತ್ತೆ ಆರಂಭಿಸಿದ್ದಾರೆ. ಈ ಸಂಬಂಧ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯಾದೀಪ ಕೋಚಿಂಗ್ ಕೇಂದ್ರದ ಮಕ್ಕಳನ್ನೇ ಅಲ್ಲಿಯೂ ಸೇರಿಸಿಕೊಳ್ಳಲಾಗಿದೆ. ಕಾಯಕ ಕಿರಿಯ ಪ್ರಾಥಮಿಕ ಶಾಲೆಯು ಇಲಾಖೆಯ ಅನುಮತಿ ಹಾಗೂ ಮಾನ್ಯತೆ ಪಡೆದಿರುವುದಿಲ್ಲ. ಅನಧಿಕೃತವಾಗಿ ಶಾಲೆ ನಡೆಸಲಾಗುತ್ತಿದೆ. ಮಕ್ಕಳ ಪಾಲಕರಿಂದ ಹೆಚ್ಚಿನ ಹಣ ಪಡೆದು ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿದ್ದು, ಮಕ್ಕಳು, ಪಾಲಕರು ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಮೂಲಸೌಕರ್ಯಗಳಿಲ್ಲದೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಒಂದೇ ಕಡೆ ಕೂಡಿ ಹಾಕಿ ಶಾಲೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಶಾಲೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಾಲೆ ಬಂದ್ ಮಾಡಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.ಅನಧಿಕೃತ ಶಾಲೆಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಒಂದೇ ಕಡೆ ಕೂಡಿ ಹಾಕಿ ಶಾಲೆ ನಡೆಸುತ್ತಿರುವುದು ಅಕ್ಷ್ಯಮ ಅಪರಾಧವಾಗಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಆರ್. ಚೆನ್ನಬಸ್ಸು ವನದುರ್ಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ
ಶಾಲೆಯಲ್ಲಿ 32 ವಿದ್ಯಾರ್ಥಿಗಳು ಅಭ್ಯಾಸ 1ರಿಂದ 5ನೇ ತರಗತಿವರೆಗೆ ಶಾಲೆ ಅನಧಿಕೃತ ಕೇಂದ್ರಗಳಿಗೆ ರಾಜಕೀಯ ರಕ್ಷಣೆ
ಬಿಇಒ ಅವರು ದೂರು ಸಲ್ಲಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಇನ್ನೂ ಯಾವುದೇ ದೂರು ದಾಖಲಾಗಿಲ್ಲಎಸ್.ಎಂ. ಪಾಟೀಲ ಪಿ.ಐ ಶಹಾಪುರ ಠಾಣೆ
ಬಿಇಒ ನಿರ್ದೇಶನದಂತೆ ವಿದ್ಯಾದೀಪ ಕೋಚಿಂಗ್ ಕೇಂದ್ರಕ್ಕೆ ಭೇಟಿ ನೀಡಿದಾಗ ಪರವಾನಗಿ ಇಲ್ಲ. ಬೇರೆ ಶಾಲೆ ಹೆಸರಿನಲ್ಲಿ ಕೋಚಿಂಗ್ ನಡೆಸುತ್ತಿರುವುದು ಕಂಡು ಬಂದಿದೆಬಿ.ಎಸ್. ಸೂರ್ಯವಂಶಿ ಅಕ್ಷರ ದಾಸೋಹ ಅಧಿಕಾರಿ
ಅನಧಿಕೃತ ಶಾಲೆಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಒಂದೇ ಕಡೆ ಕೂಡಿ ಹಾಕಿ ಶಾಲೆ ನಡೆಸುತ್ತಿರುವುದು ಅಕ್ಷ್ಯಮ ಅಪರಾಧವಾಗಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಆರ್. ಚೆನ್ನಬಸ್ಸು ವನದುರ್ಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.