ADVERTISEMENT

ಹುಣಸಗಿ: ಕಾಲುಬಾಯಿ ರೋಗ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:02 IST
Last Updated 25 ಅಕ್ಟೋಬರ್ 2024, 16:02 IST
ಹುಣಸಗಿ ತಾಂಡಾದಲ್ಲಿ ಜಾನುವಾರುಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಹಾಕಲಾಯಿತು
ಹುಣಸಗಿ ತಾಂಡಾದಲ್ಲಿ ಜಾನುವಾರುಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಹಾಕಲಾಯಿತು   

ಹುಣಸಗಿ: ‘ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ ನಿಯಂತ್ರಿಸಲು ರೈತರು ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ನಾಯಕ ಹೇಳಿದರು.

ಹುಣಸಗಿ ತಾಂಡದಲ್ಲಿ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಮಹಿಬೂಬಸಾಬ್ ಖಾಜಿ ಮಾತನಾಡಿ, ‘ಕಾಲುಬಾಯಿ ರೋಗ ನಿರ್ಮೂಲನೆಗೊಳಿಸಲು ಜಾನುವಾರುಗಳಿಗೆ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಬೇಕು. ಪ್ರತಿ ಗ್ರಾಮಕ್ಕೂ ನಮ್ಮ ವೈದ್ಯರ ತಂಡ ಭೇಟಿ ನೀಡಲಿದ್ದು ಎಲ್ಲರೂ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಇದು ಉಚಿತವಾಗಿರುತ್ತದೆ’ ಎಂದರು.

ADVERTISEMENT

ಪಶುವೈದ್ಯ ಡಾ. ಚೈತ್ರಾ.ಆರ್. ಮಾತನಾಡಿದರು.

ಈ ಸಂದರ್ಭದಲ್ಲಿ ತಾಂಡಾದ ಮುಖಂಡರಾದ ವಿಠ್ಠಲ ಪವಾರ್, ಬೋಜಾನಾಯ್ಕ, ಬಿಲಾನಾಯ್ಕ, ಈಶ್ವರ ಗುಲಾಬಿ, ಶಾಂತಾನಾಯ್ಕ ಹಾಗೂ ಸಿಬ್ಬಂದಿ ರಾಮಪ್ಪ ತಳವಾರ, ರವಿ ಚವ್ಹಾಣ, ಇಮಾಮ, ಬಾಪಗೌಡ, ಭೀಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.