ADVERTISEMENT

ವಿಧಾನ ಪರಿಷತ್ ಸಭೆಯಲ್ಲಿ ಸಮಸ್ಯೆ ಬಗ್ಗೆ ಚರ್ಚೆ: ಛಲವಾದಿ ನಾರಾಯಣಸ್ವಾಮಿ

ಕರವೇ ಪ್ರಮುಖ ಬೇಡಿಕಗಳ ಈಡೇರಿಕೆಗೆ ಸೂಕ್ತ ಕ್ರಮದ ಭರವಸೆ; ಸತ್ಯಾಗ್ರಹ ಅಂತ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:09 IST
Last Updated 4 ಅಕ್ಟೋಬರ್ 2024, 14:09 IST
ವಡಗೇರಾ ಪಟ್ಟಣದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಬೆಂಬಲ ಸೂಚಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು
ವಡಗೇರಾ ಪಟ್ಟಣದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಬೆಂಬಲ ಸೂಚಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು    

ವಡಗೇರಾ: ‘ನೂತನ ವಡಗೇರಾ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಮುಂದಿನ ವಿಧಾನ ಪರಿಷತ್ ಸಭೆಯಲ್ಲಿ ಧ್ವನಿ ಎತ್ತಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಕಚೇರಿಗಳ ಆರಂಭ ಹಾಗೂ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಗೋನಾಲ್, ಶಿವಪುರ, ಗುಂಡುಗುರ್ತಿ, ರೈತರ ಪಹಣಿ, ಟಿಪ್ಪಣಿ ಆಕಾರ ಬಂದ ನ್ಯೂನ್ಯತೆ ಸರಿಪಡಿಸುವಂತೆ ಒತ್ತಾಯಿಸಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ನಾವು ಕೇವಲ ಅಧಿಕಾರದ ಆಸೆಗೆ ಬಿದ್ದು ಅಧಿಕಾರ ಪಡೆದರೆ ಸಾಲದು, ಅಧಿಕಾರ ಸಿಕ್ಕ ನಂತರ ಇಂಥ ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸಬೇಕು. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕರು ಏನು ಮಾಡಿದ್ದಾರೋ ಅದರ ಬಗ್ಗೆ ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಾನು ವಿಧಾನ ಪರಿಷತ್‌ನ ಸಭೆಯಲ್ಲಿ ಯಾದಗಿರಿ ಜಿಲ್ಲೆಯ ಬಗ್ಗೆ ಅದರಲ್ಲೂ ವಿಷೇಶವಾಗಿ ವಡಗೇರಾ ತಾಲ್ಲೂಕಿನ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿ ಸಮಸ್ಯೆಗಳನ್ನು ಬಗ್ಗೆ ಬೆಳಕು ಚೆಲ್ಲಲಾಗುವುದು’ ಎಂದು ಹೇಳಿದರು.

ADVERTISEMENT

ಕರವೇ ವಡಗೇರಾ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಯಾದಗಿರಿ ಉಪವಿಭಾಧಿಕಾರಿ ಪಂಪಣ್ಣ ಸಜ್ಜನ್‌ ಭೇಟಿ ನೀಡಿ ಸತ್ಯಾಗ್ರಹ ಧರಣಿ ಅಂತ್ಯಕ್ಕೆ ಮನವಲಿಸಿ ಸತ್ಯಾಗ್ರಹ ಕೊನೆಗೊಳಿಸಿ, ಮನವಿ ಪತ್ರ ಸ್ವೀಕರಿಸಿ ನಿಮ್ಮ ಬೇಡಿಕೆಗಳ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ್, ಸಿದ್ದಣ್ಣಗೌಡ ಕಾಡಂನೂರ, ಬಾಶುಮಿಯ್ಯ ನಾಯ್ಕೋಡಿ, ರಾಚಣ್ಣಗೌಡ ಮುದ್ನಾಳ್, ಭೀಮನಗೌಡ ಕ್ಯಾತ್ನಾಳ, ಮಹೇಶರೆಡ್ಡಿಗೌಡ ಮುದ್ನಾಳ, ಪರಶುರಾಮ್ ಕುರುಕುಂದಿ, ನಿಂಗಪ್ಪ ಹತ್ತಿಮನಿ, ಬಸವರಾಜ ಸೊನ್ನದ, ವಿಲಾಸ್ ಪಾಟೀಲ್, ರಾಜಶೇಖರ ಕಾಡಂನೋರ, ಕರವೇ ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವುರ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಶರಣು ಇಟಗಿ, ಶಿವರಾಜ ನಾಡಗೌಡ, ವಿಶ್ವಾರಾಧ್ಯ ದಿಮ್ಮಿ, ಅಂಬರೀಶ್ ಹತ್ತಿಮನಿ, ವಿಶ್ವರಾಜ ಹೊನಗೇರಾ, ಬಸ್ಸು ನಾಯಕ್, ಮಲ್ಲು ಬಾಡಿಯಾಳ, ಸತೀಶ್, ಫಕೀರ್ ಅಹ್ಮದ ಮರಡಿ, ಸಿದ್ದು ಪೂಜಾರಿ ಇತರರು ಉಪಸ್ಥಿತರಿದ್ದರು.

‘ಹಣ ಬಿಡುಗಡೆಯಾದರೂ ನಡೆಯದ ಭೂಮಿಪೂಜೆ’

ಕಳೆದ ಎಂಟು ವರ್ಷಗಳ ಹಿಂದೆ ತಾಲ್ಲೂಕು ಘೋಷಣೆಯಾಗಿದೆ. ಆದರೆ ಇಲ್ಲಿಯ ಅಭಿವೃದ್ಧಿ ನೋಡಿದರೆ ಆಶ್ಚರ್ಯವಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ತಾಲ್ಲೂಕು ಕಚೇರಿಗಳು ಬರುವುದು ಬಿಡಿ ಕಳೆದ ಸರ್ಕಾರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಿವೇಶನ ಗುರುತಿಸಿ ಅದಕ್ಕಾಗಿಯೇ ₹10 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಇಲ್ಲಿಯವರೆಗೆ ಇಲ್ಲಿ ವಿಧಾನಸೌದ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಸಹ ಮಾಡಿಲ್ಲ. ಇದನ್ನು ನೋಡಿದರೆ ಈ ಭಾಗದ ಶಾಸಕರ ಜನಪರ ಕಾಳಜಿ ಅರ್ಥವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.