ಯಾದಗಿರಿ: ವಿಜಯದಶಮಿ ಹಬ್ಬದ ನಂತರವೂ ತರಕಾರಿ, ಸೊಪ್ಪುಗಳ ದರದಲ್ಲಿ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಗೆ ತರಕಾರಿ ಆವಕದಲ್ಲಿ ಏರುಪೇರು ಕಂಡು ಬಂದಿದೆ.
ಹಬ್ಬದ ಸಂದರ್ಭದಲ್ಲಿಯೂ ಕೆಲ ತರಕಾರಿಗಳ ದರ ಕಡಿಮೆಯಾಗಿತ್ತು. ಆದರೆ, ಈಗ ಹಬ್ಬದ ನಂತರವೂ ಬೆಲೆ ಏರಿಕೆಯಾಗಿದೆ.
ಕಳೆದ ವಾರಕ್ಕಿಂತ ಈ ವಾರ ಟೊಮೆಟೊ ಬೆಲೆಯಲ್ಲಿ ₹5ರಿಂದ ₹10 ದರ ಏರಿಕೆಯಾಗಿದೆ. ಒಂದೊಂದು ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದು ದರವಿದೆ.
ಜಿಲ್ಲೆಯಲ್ಲಿ ಟೊಮೆಟೊ ಆವಕ ಸಿಗುತ್ತಿಲ್ಲ. ಬೇರೆ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸುವ ಮಾತಾಗಿದೆ.
ಈ ವಾರವೂ ಬೀನ್ಸ್ ದರ ಚಿಲ್ಲರೆ ಅಂಗಡಿಗಳಲ್ಲಿ ಸೆಂಚುರಿ ದಾಟಿದೆ. ಮುಖ್ಯ ಮಾರುಕಟ್ಟೆಗಳಲ್ಲಿ ಮಾತ್ರ ಚಿಲ್ಲರೆ ಅಂಗಡಿಗಳಿಗಿಂತ ₹10ರಿಂದ ₹20 ಕಡಿಮೆ ದರವಿದೆ.
ಸೊಪ್ಪುಗಳ ದರ: ಈ ಬಾರಿಯೂ ಸೊಪ್ಪುಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೆಂತ್ಯೆ ₹25–30, ಸಬ್ಬಸಗಿ ₹15–20, ಪಾಲಕ್, ಪುಂಡಿ, ರಾಜಗಿರಿ, ₹10ಗೆ ಒಂದು ₹20ಗೆ ಮೂರು ಕಟ್ಟು ಸೊಪ್ಪು
ಸಿಗುತ್ತಿದೆ. ಕೋತಂಬರಿ ₹25–30 ಒಂದು ಕಟ್ಟು, ಪುದೀನಾ ₹20–25 ಒಂದು ಕಟ್ಟು, ಕರಿಬೇವು ₹60 ಕೆಜಿ, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ₹100–120, ಶುಂಠಿ ₹60–70, ನಿಂಬೆಹಣ್ಣು ₹5ಗೆ ಒಂದು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.