ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ನಿಂಗರಾಜ್ ಭೀಮರಾಯ ಬೇವಿನಹಳ್ಳಿ,ಅಯ್ಯಪ್ಪ ಸಂಗಪ್ಪ ನಾಟೆಕಾರ್,ಭಿಮಾಶಂಕರ್ ಮಲ್ಲಯ್ಯ, ಶರಣು ಮಹಾದೇವಪ್ಪ ನಾಯಕೋಡಿ ಬಂಧಿಸಲಾಗಿದೆ.
ವಿಡಿಯೊದಲ್ಲಿದ್ದ ಮಹಿಳೆಯನ್ನು ಪತ್ತೆ ಮಾಡಿ ಅವರ ಹೇಳಿಕೆಯ ಸಾರಾಂಶದ ಮೇಲೆ ಶಹಪುರ ಠಾಣಾ ಗುನ್ನೆ ನಂ 212/2021 ಕಲಂ 354(b), 366, 394,376(d), 504,506 r/w 34 ಐಪಿಸಿ ಮತ್ತು 3(1)(w), 3(2)(v) SC/ST PA act ಅಡಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
'ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.