ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮೇಳೈಸಿದೆ. ಕ್ರಿಸ್‌ಮಸ್‌ಗೆ ಮುನ್ನುಡಿಯಾಗಿ ಕ್ಯಾರಲ್ ಗಾಯನ ನಡೆಯುತ್ತಿದ್ದು, ಮನೆ ಮನೆಗೆ ತೆರಳಿ ಶುಭಾಶಯ ವಿನಿಮಯ ಮಾಡಲಾಗುತ್ತಿದೆ.
ಮನೆ ಮನೆಗೆ ತೆರಳಿ ಯೇಸು ಕ್ರಿಸ್ತನ ಶುಭ ಸಂದೇಶ ಸಾರುವ ಕ್ಯಾರಲ್ ಗಾಯನ ಮಹತ್ವ ಸ್ಥಾನ ಪಡೆದಿದೆ. ಸಂಜೆ ದೇವಾಲಯದಲ್ಲಿ ಸೇರಿ ಅಲ್ಲಿಂದ ಕ್ರೈಸ್ತರ ಮನೆಗಳಿಗೆ ತೆರಳುತ್ತಾರೆ. ಹಾಡು, ಬೋಧನೆ ನಂತರ ಬಂದವರಿಗೆ ಮನೆಯವರು ತಮ್ಮ ಇಷ್ಟದ ತಿಂಡಿ, ಚಹಾ, ಕಾಫಿ ನೀಡುತ್ತಾರೆ. ನಂತರ ಅಲ್ಲಿಂದ ಬೇರೆ ಕಡೆ ತೆರಳುತ್ತಾರೆ.
ನಗರದ ಕೇಂದ್ರ ಮೆಥೋಡಿಸ್ಟ್ ದೇವಾಲಯ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಡಿ.1ರಿಂದಲೇ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.
ಕೇಂದ್ರ ಮೆಥೋಡಿಸ್ಟ್ ದೇವಾಲಯದಲ್ಲಿ ಡಿ.15ರಿಂದ ಕ್ಯಾರಲ್ ಗಾಯನ ಆರಂಭಗೊಂಡಿದ್ದು, ಡಿ.23ಕ್ಕೆ ಕೊನೆಗೊಳ್ಳಲಿದೆ. ಸಂಜೆ 7 ಗಂಟೆಯಿಂದ ಮಧ್ಯಾರಾತ್ರಿ 12 ಗಂಟೆಗೆಲ್ಲ ಮುಕ್ತಾಯ ಮಾಡಲಾಗುತ್ತಿದೆ. ಕ್ರಿಸ್‌ಮಸ್ ಕ್ಯಾರಲ್ ವೇಳೆ ಕ್ರೈಸ್ತರ ಪ್ರತಿಯೊಂದು ಮನೆಗೂ ತೆರಳಿ ಹಬ್ಬದ ಶುಭಾಶಯ ಕೋರುವುದು ವಿಶೇಷವಾಗಿದೆ.
‘ಪೊಲೀಸರ ಅನುಮತಿ ಪಡೆದು ಕ್ರಿಸ್‌ಮಸ್ ಕ್ಯಾರಲ್ ಆಯೋಜಿಸಲಾಗಿದೆ. ಎಲ್ಲಿಯೂ ನಿಯಮ ಮೀರಿ ಕಾರ್ಯಕ್ರಮ ಮಾಡುವುದಿಲ್ಲ. ಮಾರ್ಗಸೂಚಿ ಪ್ರಕಾರ ನಡೆಯುತ್ತದೆ’ ಎನ್ನುತ್ತಾರೆಮೆಥೋಡಿಸ್ಟ್ ಜಿಲ್ಲಾ ಮೇಲ್ವಿಚಾರಕರೆವೆರೆಂಡ್ ಸತ್ಯಮಿತ್ರ ಅವರು.
ಡಿಸೆಂಬರ್ 1ರಂದು ಕ್ರಿಸ್‌ಮಸ್ ಹಬ್ಬವನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಸಲಾಗಿದೆ. ವಿವಿಧ ಚರ್ಚ್‌ಗಳಲ್ಲಿ ಮಕ್ಕಳಿಂದ ಸಾಮೂಹಿಕ ನೃತ್ಯ, ಸಂಟಾಕ್ಲಾಸ್ ಉಡುಗೆ ಧರಿಸಿ ಮಕ್ಕಳು ಸಂಭ್ರಮಿಸಿದ್ದಾರೆ. ಈಗ ಕ್ಯಾರಲ್ ಗಾಯನದಲ್ಲಿ ಮನೆಮನೆಗೆ ತೆರಳಿ ಸಂಟಾಕ್ಲಾಸ್ ವೇಷ ಧರಿಸಿದ ಯುವಕರು ಮನೆಯಲ್ಲಿರುವ ಚಿಕ್ಕಮಕ್ಕಳ ಚಾಕೊಲೋಟ್ ನೀಡಿ ಮಕ್ಕಳನ್ನು ಖುಷಿ ಪಡಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ವಿವಿಧ ಕಾರ್ಯಕ್ರಮ: ಕ್ರಿಸ್‌ಮಸ್ ಅಂಗವಾಗಿ ನಗರದ ಚಿರಂಜೀವಿ ಶಾಲೆಯಲ್ಲಿ 21ರಂದು ಕ್ರಿಸ್‌ಮಸ್ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದೇ ರೀತಿ ಡಿ.23ರಂದು ಕ್ರಿಸ್‌ಮಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಡಿ.25ರಂದು ಬೆಳಿಗ್ಗೆ 9.30ರಿಂದ ಕ್ರಿಸ್‌ಮಸ್ ಹಬ್ಬದ ವಿಶೇಷ ಆರಾಧನೆ ಹಮ್ಮಿಕೊಳ್ಳಲಾಗಿದೆ.
‘ಕ್ರಿಸ್‌ಮಸ್ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕ್ರೈಸ್ತ ವಿಶ್ವಾಸಿಗಳು ನಡೆಸಿಕೊಂಡು ಬರುತ್ತಿದ್ದಾರೆ. ವಿವಿಧ ಸಿದ್ಧತೆಗಳು ನಡೆದಿದ್ದು, ಹಳ್ಳಿಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ಚರ್ಚ್ ಸಭಾಪಾಲಕ ಡೇವಿಡ್.
* ಡಿ.1ರಂದಲೇ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆ ನಡೆದಿದ್ದು, ಈ ತಿಂಗಳಿನ ಪ್ರತಿಯೊಂದು ಭಾನುವಾರ ವಿಶೇಷ ಆರಾಧನೆ ಕೂಟಗಳನ್ನು ಚರ್ಚ್‌ಗಳಲ್ಲಿ ನಡೆಸಲಾಗುತ್ತಿದೆ.
-ರೆವೆರೆಂಡ್ ಸತ್ಯಮಿತ್ರ, ಮೆಥೋಡಿಸ್ಟ್ ಜಿಲ್ಲಾ ಮೇಲ್ವಿಚಾರಕ
* ಯೇಸು ಕ್ರಿಸ್ತನು ಜನ್ಮದಿನದ ಸಂಭ್ರಮವನ್ನು ಜನರಿಗೆ ತಿಳಿಸುವ ಕ್ಯಾರಲ್ ಗಾಯನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಭಕ್ತರು ಭಾಗವಹಿಸಿದ್ದಾರೆ.
-ರೆವೆರೆಂಡ್ ಯೇಸುನಾಥ ನಂಬಿ, ಸಹಾಯಕ ಸಭಾಪಾಲಕ, ಕೇಂದ್ರ ಮೆಥೋಡಿಸ್ಟ್ ಚರ್ಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.