ADVERTISEMENT

'ಬಯಲಾಟ ಮಾಸ್ತರ್ 'ಗೆ ಒಲಿದ ರಾಜ್ಯೋತ್ಸವ

ನಗನೂರ ಗ್ರಾಮದ ತಿಪ್ಪಣ್ಣ ಹೆಳವರ್ ಹುಡುಕಿ ಬಂದ ಪುರಸ್ಕಾರ

ಪವನ ಕುಲಕರ್ಣಿ
Published 30 ಅಕ್ಟೋಬರ್ 2022, 19:30 IST
Last Updated 30 ಅಕ್ಟೋಬರ್ 2022, 19:30 IST
ತಿಪ್ಪಣ್ಣ ಹೆಳವರ್
ತಿಪ್ಪಣ್ಣ ಹೆಳವರ್   

ಕೆಂಭಾವಿ: ರಂಗಭೂಮಿ ಕ್ಷೇತ್ರದಲ್ಲಿ ತಿಪ್ಪಣ್ಣ ಹೆಳವರ್ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಬಯಲಾಟ ಕಲಾವಿದನಿಗೆ ಪುರಸ್ಕಾರ ಹುಡುಕಿಕೊಂಡು ಬಂದಿದೆ.

ಇಲ್ಲಿಗೆ ಸಮೀಪದ ನಗನೂರ ಗ್ರಾಮದ ತಿಪ್ಪಣ್ಣ ಹೆಳವರ್ ಅವರಿಗೆ ಈಗ 85 ವರ್ಷವಾಗಿದ್ದು, ತಂದೆ ಶಿವಲಿಂಗಪ್ಪ, ತಾಯಿ ಮಲ್ಲಮ್ಮ ಉದುರದಲ್ಲಿ ಜನಿಸಿದ ಏಕೈಕ ಪುತ್ರರಾಗಿದ್ದಾರೆ.

1944ರ ಜನವರಿ 1 ರಂದು ಜನಿಸಿರುವ ಹೆಳವರ್ ಸಣ್ಣವರು ಇರುವಾಗಲಿಂದಲೇ ಬಯಲಾಟದಲ್ಲಿ ತೊಡಗಿಸಿಕೊಂಡಿದ್ದರು.

ತಿಪ್ಪಣ್ಣ ಪತ್ನಿ ಮುರಿಗೆಮ್ಮ, ಏಕೈಕ ಸುಪುತ್ರ ಗುರಣ್ಣ ತಂದೆಗೆ ಪ್ರಶಸ್ತಿ ಬಂದಿರುವುದಕ್ಕೆ ಹರ್ಷಗೊಂಡಿದ್ದಾರೆ.

ಹಿಂದುಳಿದ ವರ್ಗದ ಅಲೆಮಾರಿ ಹೆಳವ - ಪಿಚ್ಚ ಗುಂಟಲು ಸಮುದಾಯಕ್ಕೆ ಸೇರಿದ ತಿಪ್ಪಣ್ಣ ಹೆಳವರ್‌ ಓದು ಬರಹ ಗೊತ್ತಿಲ್ಲದ ಅನರಕ್ಷರಸ್ಥರಾಗಿದ್ದರೂ ಬಯಲಾಟದಲ್ಲಿ ಸಾಧನೆ ಮಾಡಿದ್ದಾರೆ.

ಬಯಲಾಟ ಪ್ರಸಂಗದಲ್ಲಿ ಓಮ್ಮೊಮ್ಮೆ ಕೆಲವನ್ನು ನೆನಪಿನಲ್ಲಿಟ್ಟುಕೊಳ್ಳಲು ಓದುಬರಹ ಅವಶ್ಯಕ. ಯಾವುದೇ ಶಾಲೆಯ ಮೆಟ್ಟಲನ್ನು ಹತ್ತಿದೆ ಮನೆಯಲ್ಲೇ ಬಯಲಾಟದ ಕಲೆಗಳನ್ನು ಕಲಿತು ಇತರಿಗೆ ಕಲಿಸಿ 'ಮಾಸ್ತರ್‌' ಎನಿಸಿಕೊಂಡಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಲೆ ಸಾಹಿತ್ಯ, ಸಣ್ಣ ವಯಸ್ಸಿನಲ್ಲಿ ಗೀಳು ಅಳವಡಿಸಿಕೊಂಡವರು ತಿಪ್ಪಣ್ಣ ಆಗಿದ್ದಾರೆ. ತಿಪ್ಪಣ್ಣ ಹೆಳವರ್ ಬಯಲಾಟದೊಂದಿಗೆ ತಮ್ಮ ಸಮುದಾಯದ ಸಾಂಪ್ರದಾಯಕ ಕುಲ ಕಸುಬಾದ ಒಕ್ಕಲು ಮನೆತನಗಳಿಗೆ ತೆರಳಿ ಅವರ ಕುಟುಂಬದ ಜನನ ಮತ್ತು ಮರಣಗಳನ್ನು ದಾಖಲಿಸಿ ಒಕ್ಕಲು ಮನೆತನದವರು ನೀಡುವ ಭಿಕ್ಷೆಯನ್ನು ಸ್ವೀಕರಿಸಿ ನಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ಬಾಲ್ಯದ ದಿನಗಳಿಂದಲೂ ದೊಡ್ಡಾಟ, ಶ್ರೀ ಕೃಷ್ಣ ಪಾರಿಜಾತ ಹಾಗೂ ಬಯಲಾಟದ ಮೂಲಕ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಲಕ್ಕುಂಡಿ ಗ್ರಾಮದವರು. ಕಳೆದ 20 ವರ್ಷಗಳಿಂದ ನಗನೂರ ಗ್ರಾಮದಲ್ಲಿ ಪತ್ನಿ ಮುರಿಗೆಮ್ಮ, ಏಕೈಕ ಪುತ್ರ ಗುರಣ್ಣ ಜೊತೆ ವಾಸವಾಗಿದ್ದಾರೆ.

'ರಾಜ್ಯದಲ್ಲಿ ಹಿಂದುಳಿದ ಅಲೆಮಾರಿ ಹೆಳವ ಸಮಾಜದ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅಖಿಲ ಕರ್ನಾಟಕ ಹೆಳವ ಸಮಾಜದ ವತಿಯಿಂದ ರಾಜ್ಯ ಘಟಕ ಅಭಿನಂದನೆಗಳನ್ನು ಸಲ್ಲಿಸುತ್ತದೆ' ಮುಖಂಡರು ತಿಳಿಸಿದ್ದಾರೆ.

***

ADVERTISEMENT

ಜೀವನ ಪರ್ಯಂತ ಬಯಲಾಟ, ನಾಟಕ ಮಾಡಿಕೊಂಡಿದ್ದವನಿಗೆ ಈ ವಯಸ್ಸಿನಲ್ಲಿ ಸರ್ಕಾರ ಗುರುತಿಸಿದೆ. ಈ ಬಗ್ಗೆ ಹೆಮ್ಮೆ ಇದೆ‌. ಇಲ್ಲಿಯವರೆಗೆ ನಮ್ಮನ್ನು ಯಾರೂ ಗುರುತಿಸಿಲ್ಲ. ಈಗ ಪ್ರಶಸ್ತಿ ಸಿಕ್ಕಿರುವುದು ಖುಷಿಯ ಸಂಗತಿ
ತಿಪ್ಪಣ್ಣ ಹೆಳವರ್, ಬಯಲಾಟ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.