ಯಾದಗಿರಿ: ಕಕ್ಕೇರಾ ಸಮೀಪದ ನೀಲಕಂಠರಾಯನಗಡ್ಡಿಯ ಎಂಟು ಜನ ಗ್ರಾಮಸ್ಥರು ಕಕ್ಕೇರಾ ಪಟ್ಟಣಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಪ್ರವಾಹದ ವಿರುದ್ಧ ಈಜಿಕೊಂಡು ಬಂದಿದ್ದಾರೆ.
ಲಕ್ಷ್ಮಣ, ಕನಕಪ್ಪ, ಹಣಮಂತ,ದೊಡ್ಡ ಹಣಮಂತ, ರಾಮಣ್ಣ,ಯಂಕಪ್ಪ, ಸೋಮಣ್ಣ, ನೀಲಪ್ಪ ಪ್ರವಾಹದ ವಿರುದ್ಧ ಈಜಿದ ಗ್ರಾಮಸ್ಥರು.
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ1.85 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದು, ನೀಲಕಂಠರಾಯನಗಡ್ಡಿ ನಡುಗಡ್ಡೆಯಾಗಿದೆ. ಇದರಿಂದ ಹೊರ ಸಂಪರ್ಕ ಕಡಿದುಕೊಂಡಿರುವ ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಲು ಈಜಿಕೊಂಡು ಬಂದಿದ್ದಾರೆ ಎಂದು ಸ್ಥಳೀಯ ಶಾಲಾ ಮುಖ್ಯ ಶಿಕ್ಷಕ ಬಸವನಗೌಡ ಪಾಟೀಲ ತಿಳಿಸಿದ್ದಾರೆ.
ಆಗಸ್ಟ್ 10ರಂದು ಕೃಷ್ಣಾ ನದಿಗೆ 6 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಹೈಡ್ರೊ ಪವರ್ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.