ADVERTISEMENT

ದ್ವಿತೀಯ ಪಿಯು ಫಲಿತಾಂಶ: ಸ್ಥಾನ ಹೆಚ್ಚಿಸಿಕೊಂಡ ಯಾದಗಿರಿ ಜಿಲ್ಲೆ

ಬಿ.ಜಿ.ಪ್ರವೀಣಕುಮಾರ
Published 11 ಏಪ್ರಿಲ್ 2024, 7:46 IST
Last Updated 11 ಏಪ್ರಿಲ್ 2024, 7:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಯಾದಗಿರಿ: ಮಾರ್ಚ್ 1 ರಿಂದ 22 ರ ವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, ಬುಧವಾರ (ಏ.10) ರಂದು ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲೆಯೂ 26ನೇ ಸ್ಥಾನಕ್ಕೆ ಏರಿಕೆಯಾಗಿದೆ. 2023ರಲ್ಲಿ 32 ಸ್ಥಾನದಲ್ಲಿತ್ತು.

ಪ್ರತಿ ಬಾರಿಯೂ ಫಲಿತಾಂಶದಲ್ಲಿ ಜಿಲ್ಲೆಯೂ ಕೊನೆ ಸ್ಥಾನ ಕಾಯಂ ಆಗಿತ್ತು. ಆದರೆ, ಈ ವರ್ಷದ ಫಲಿತಾಂಶದಲ್ಲಿ ಹೆಚ್ಚಳ ಕಂಡಿದ್ದು, ಜಿಲ್ಲೆಯ ಜನತೆ ಹರ್ಷಿಸುವಂತೆ ಆಗಿದೆ. ಅಲ್ಲದೇ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶ್ರಮ ಕೆಲಸ ಮಾಡಿದೆ.

ADVERTISEMENT

11,135 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 8,265 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 77.29 ರಷ್ಟು ಫಲಿತಾಂಶ ಬಂದಿದೆ. ರಾಜ್ಯ ಮಟ್ಟದಲ್ಲಿ 26ನೇ ಸ್ಥಾನ ಪಡೆದಿದೆ.

ರೆಗುಲರ್ ಅಭ್ಯರ್ಥಿಗಳು 9,814 ಪರೀಕ್ಷೆಗೆ ಹಾಜರಾಗಿದ್ದು 7,585 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ, ವಾಣಿಜ್ಯ ಸಂಯೋಜನೆ, ವಿಜ್ಞಾನ ಸಂಯೋಜನೆ ವಿಭಾಗಗಳಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.

ಕಲಾ ಸಂಯೋಜನೆ ವಿಭಾಗದಲ್ಲಿ 6,707 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,651 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 69.35 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 1,089 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 725 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 66.57 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 3,339 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,889 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 86.52 ಪ್ರತಿಶತ ಬಂದಿದೆ.

ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶದ 8,871 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6,486 ವಿದ್ಯಾರ್ಥಿಗಳು ಫಲಿತಾಂಶ ಪಡೆದಿದ್ದಾರೆ. 73.11ಪ್ರತಿಶತ ಬಂದಿದೆ.

ಗ್ರಾಮಾಂತರ ವಿಭಾಗದಲ್ಲಿ 2,264 ವಿದ್ಯಾರ್ಥಿಗಳಲ್ಲಿ 1,779 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 78.58 ಬಂದಿದೆ. ಈ ವರ್ಷವೂ ಕೂಡ ಬಾಲಕರು ಹಿನ್ನಡೆ ಅನುಭವಿಸಿದ್ದಾರೆ. 5,792 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 4,044 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 69.82 ರಷ್ಟು ಪ್ರತಿಶತ ಫಲಿತಾಂಶ ಬಂದಿದೆ. ಇನ್ನೂ ಬಾಲಕಿಯರು 5,343 ಪರೀಕ್ಷೆಗೆ ಹಾಜರಾಗಿದ್ದು, 4,221 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ 79 ಫಲಿತಾಂಶ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.