ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಶುಕ್ರವಾರ 421.23 ಮಟ್ಟ ಕಾಯ್ದುಕೊಂಡು ವಿದ್ಯುತ್ ಸ್ಥಾವರಕ್ಕೆ 6,000 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಕಳೆದ ಎರಡು ದಿನಗಳಿಂದಲೂ 1.33 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 1.30 ಲಕ್ಷ ಕ್ಯುಸೆಕ್ ಒಳಹರಿವು ಇದೆ.
18 ಕ್ರಸ್ಟ್ ಗೇಟುಗಳಿಂದ ನೀರು ಹರಿಸುವ ದೃಶ್ಯ ರುದ್ರ ರಮಣೀಯವಾಗಿದೆ. 1.30 ಮೀಟರ್ ಗೇಟುಗಳನ್ನು ಎತ್ತರಿಸಿದ್ದು, ಜಲಾಶಯದಿಂದ ನೀರು ಚಿಮ್ಮುತ್ತ ಹಾಲ್ನೊರೆಯಂತೆ ಉಕ್ಕುವ ದೃಶ್ಯ ಕಣ್ಮನ ಸೆಳೆಯುತ್ತಿದೆ. ಸದ್ಯ 28.77 ಟಿಎಂಸಿ ಸಂಗ್ರಹ ಹೊಂದಿದೆ. ಒಟ್ಟಾರೆ ಜಲಾಶಯದ ಮಟ್ಟ 425.25 ಮೀಟರ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.