ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
ಫೆಬ್ರುವರಿ 21ರಂದು ಅಧಿಕೃತ ಅಧಿಸೂಚನೆ ಮೂಲಕ ಅರ್ಜಿ ಆಹ್ವಾನಿಸಿದೆ. ಭರ್ತಿ ಮಾಡಿದ ಅರ್ಜಿ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಅಭ್ಯರ್ಥಿಯು ಮಾ 15ರಂದು ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕ, ಬೆಂಗಳೂರು –560027. ಇಲ್ಲಿಗೆ ಹಾಜರಾಗಬೇಕು.
ಯಾವ್ಯಾವುದಕ್ಕೆ ತರಬೇತಿ :
* ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಪಾಸಾದವರಿಗೆ ಮೆಕಾನಿಕಲ್ ಡೀಸೆಲ್, ಫಿಟ್ಟರ್, ವೆಲ್ಡರ್, ಮೋಟಾರ್‌ವಹಿಕಲ್ ಬಾಡಿ ಬಿಲ್ಡರ್, ಎಲೆಕ್ಟ್ರೀಷಿಯನ್, ಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಕಂಪ್ಯೂಟರ್ ಆಪರೇಟರ್ ಕಮ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವಿಭಾಗಗಳಲ್ಲಿ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ 2 ವರ್ಷ (ವೆಲ್ಡರ್ ಹಾಗೂ ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್‌ಗೆ 15 ತಿಂಗಳು) ತರಬೇತಿ, ಉಳಿದಂತೆ ಐಟಿಐ ಪಾಸಾದವರಿಗೆ ಎಲ್ಲ ವಿಭಾಗದಲ್ಲೂ 1 ವರ್ಷ ತರಬೇತಿ ಅವಧಿ ಇದೆ.
* ಡಿಪ್ಲೊಮಾದಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್/ಇನ್‌ಫರ್ಮೇಷನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್ ಕಮ್ಯನಿಕೇಷನ್ಸ್ ಕೋರ್ಸ್ ಮಾಡಿದ ವರಿಗೆ ಒಂದು ವರ್ಷ ಅವಧಿಯ ತರಬೇತಿ ಇದೆ.
* ಸಿವಿಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್/ಇ ಆ್ಯಂಡ್ ಸಿ/ಐಟಿ ಎಂಜಿನಿಯರಿಂಗ್ ಪದವಿ /ಬಿಸಿಎ ಪದವಿ ಪೂರ್ಣಗೊಳಿಸಿದವರಿಗೆ 1 ವರ್ಷ ಅವಧಿಯ ತರಬೇತಿ ನೀಡಲಾಗುತ್ತಿದೆ.
ಮೀಸಲಾತಿ: ಅಪ್ರೆಂಟಿಸ್ ಕಾಯ್ದೆ 1961ರ ಪ್ರಕಾರ ಎಸ್.ಸಿ ವರ್ಗದ ಅಭ್ಯರ್ಥಿಗಳಗಿಎ 1:7 ಮತ್ತು ಎಸ್.ಟಿ ವರ್ಗದ ಅಭ್ಯರ್ಥಿಗಳಿಗೆ 1:15ರ ಪ್ರಮಾಣದಲ್ಲಿ ಒಟ್ಟು ಹುದ್ದೆಗಳಲ್ಲಿ ಮೀಸಲಾತಿ ಕಾಯ್ದಿರಿಸಲಾಗಿದೆ.
ಗಮನಿಸಿ: ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ. ಒಂದಕ್ಕಿಂತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಭ್ಯರ್ಥಿಗಳು ಪ್ರತಿಯೊಂದು ವೃತ್ತಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ, ತರಬೇತಿಯ ಅವಧಿ, ಭತ್ಯೆ ಸೇರಿದಂತೆ ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಜಾಲತಾಣ– www.mybmtc.karnataka.gov.inಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.