ಮುಂಬೈ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ ಜನೆರಲಿಸ್ಟ್ ಹಾಗೂ ಐಟಿ ಆಪೀಸರ್ ಹುದ್ದೆಗಳ ನೇಮಕಾತಿಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ
1)ಜನೆರಲಿಸ್ಟ್ ಆಫೀಸರ್ ಗ್ರೇಡ್–3 ಹುದ್ದೆಗಳು–200
2) ಜನೆರಲಿಸ್ಟ್ ಆಫೀಸರ್ ಗ್ರೇಡ್–2 ಹುದ್ದೆಗಳು–100
2) ಐಟಿ ಆಪೀಸರ್ ಹುದ್ದೆಗಳು–50
ವಿದ್ಯಾರ್ಹತೆ
1) ಜನೆರಲಿಸ್ಟ್ ಆಫೀಸರ್ ಗ್ರೇಡ್–3:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಹಾಗೂ ಜೆಎಐಬಿ, ಸಿಎಐಬಿಯಲ್ಲಿ ಪಾಸಾಗಿರಬೇಕು.ಎಂಬಿಎ, ಸಿಎ, ಪಡೆದವರು ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಶೇ 60% ಅಂಕಗಳನ್ನು ಪಡೆದಿರಬೇಕು. ಶೆಡ್ಯೂಲ್ ಬ್ಯಾಂಕಿನಲ್ಲಿ ಕನಿಷ್ಠ 5 ವರ್ಷಗಳು ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವೇತನ: ₹ 51,490 ಹಾಗೂ ಇತರೆ ಭತ್ಯೆಗಳು
ವಯಸ್ಸು: ಕನಿಷ್ಠ 18, ಗರಿಷ್ಠ 38 ವರ್ಷಗಳು
2) ಜನೆರಲಿಸ್ಟ್ ಆಫೀಸರ್ ಗ್ರೇಡ್–2:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಹಾಗೂ ಜೆಎಐಬಿ, ಸಿಎಐಬಿಯಲ್ಲಿ ಪಾಸಾಗಿರಬೇಕು.ಎಂಬಿಎ, ಸಿಎ, ಪಡೆದವರು ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಶೇ 60% ಅಂಕಗಳನ್ನು ಪಡೆದಿರಬೇಕು. ಶೆಡ್ಯೂಲ್ ಬ್ಯಾಂಕಿನಲ್ಲಿ ಕನಿಷ್ಠ 2 ವರ್ಷಗಳು ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವೇತನ: ₹45,950 ಹಾಗೂ ಇತರೆ ಭತ್ಯೆಗಳು
ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷಗಳು
3) ಐಟಿ ಆಪೀಸರ್:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್, ಬಿ.ಇ (ಇಇ, ಇಸಿ, ಸಿಎಸ್)ಯಲ್ಲಿ ಶೇ 55% ಅಂಕಗಳೊಂದಿಗೆ ಪಾಸಾಗಿರಬೇಕು.
ವೇತನ: ₹45,950 ಹಾಗೂ ಇತರೆ ಭತ್ಯೆಗಳು
ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷಗಳು
ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.
ನೇಮಕಾತಿ ಪ್ರಕ್ರಿಯೆ ಹಾಗೂ ಅರ್ಜಿ ಶುಲ್ಕದ ಮಾಹಿತಿಗಾಗಿಬ್ಯಾಂಕ್ ಆಫ್ ಮಹಾರಾಷ್ಟ್ರದ ವೆಬ್‌ಸೈಟ್ ನೊಡುವುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಕಡೆಯ ದಿನ:31-12-2019
ಜನೆರಲಿಸ್ಟ್ ಆಫೀಸರ್ ಹುದ್ದೆಗಳ ಅಧಿಸೂಚನೆ:https://bit.ly/2EfnLPl
ಐಟಿ ಆಪೀಸರ್ ಹುದ್ದೆಗಳ ಅಧಿಸೂಚನೆ:https://bit.ly/38F0a8m
ಬ್ಯಾಂಕ್ ವೆಬ್‌ಸೈಟ್:https://bankofmaharashtra.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.