ADVERTISEMENT

ಸ್ಪರ್ಧಾ ವಾಣಿ | ರಾಷ್ಟ್ರೀಯ ವಿದ್ಯಮಾನಗಳು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 0:30 IST
Last Updated 16 ನವೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗೋಧಿ ಹಿಟ್ಟಿನ ದರ ನಿಯಂತ್ರಣಕ್ಕೆ ಕ್ರಮ

ಕೇಂದ್ರ ಸರ್ಕಾರ  ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗೋಧಿ ಹಿಟ್ಟು ವಿತರಿಸಲು ಪ್ರತಿ ಕೆಜಿಗೆ ₹ 27.50  ಗರಿಷ್ಠ ಬೆಲೆಯನ್ನು ನಿಗದಿಪಡಿಸಿ  ‘ಭಾರತ್ ಆಟಾ’ ಗೋಧಿ ಹಿಟ್ಟಿನ ಮಾರಾಟಕ್ಕೆ ಮುಂದಾಗಿದೆ.

ADVERTISEMENT

*ಗೋಧಿ ಹಿಟ್ಟಿನ ರಾಷ್ಟ್ರೀಯ ಸರಾಸರಿ ದರ ₹ 35.93 ಪ್ರತಿ ಕೆಜಿ ಇದೆ. ಈ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. 

*ಗೋಧಿ ಹಿಟ್ಟನ್ನು ಕೇಂದ್ರೀಯ ಭಂಡಾರ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟದಿಂದ  ಮಾರುಕಟ್ಟೆಗೆ ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಕೇಂದ್ರೀಯ ಭಂಡಾರ

*ಕೇಂದ್ರ ಸರ್ಕಾರಿ ನೌಕರರ ಗ್ರಾಹಕ ಸಹಕಾರ ಸಂಘ ಲಿಮಿಟೆಡ್ ಸಂಸ್ಥೆಯನ್ನು 1963ರಲ್ಲಿ ಸ್ಥಾಪಿಸಿದ್ದು, ಈ ಸಂಸ್ಥೆಯನ್ನು ಕೇಂದ್ರೀಯ ಭಂಡಾರ ಎಂದು ಕರೆಯಲಾಗುತ್ತದೆ.

*ಕೇಂದ್ರ ಸರ್ಕಾರದ ನೌಕರರಿಗೆ ಮತ್ತು ಸಾರ್ವಜನಿಕರಿಗೆ ದೈನಂದಿನ ಅಗತ್ಯಗಳಿಗೆ ಅನುಗುಣವಾಗಿ ಗುಣಮಟ್ಟದ ಸರಕುಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.  ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಕೇಂದ್ರೀಯ ಭಂಡಾರ ಕೋವಿಡ್ ಕಾಲದಲ್ಲಿ  ಅವಶ್ಯಕ ಆಹಾರ ಧಾನ್ಯಗಳನ್ನು ಮತ್ತು ಕಿಟ್‌ಗಳನ್ನು ಬಡವರಿಗೆ ವಿತರಿಸಿತ್ತು.

ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ

*ಭಾರತದಲ್ಲಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸುವ ಸಹಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

*ಈ ಸಂಸ್ಥೆಯನ್ನು ಅಕ್ಟೋಬರ್ 2, 1958ರಲ್ಲಿ ಸ್ಥಾಪಿಸಲಾಗಿದ್ದು ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ 2002ರ ಅನ್ವಯ ನೋಂದಣಿಯಾಗಿದೆ. 

ಒಂದು ರಾಷ್ಟ್ರ ಒಂದು ನೋಂದಣಿ ವೇದಿಕೆ

*ವೈದ್ಯರ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಒಂದು ರಾಷ್ಟ್ರ ಒಂದು ನೋಂದಣಿ ವೇದಿಕೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

*ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು  ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ. ಇದಲ್ಲದೆ ಅಧಿಕಾರಿ ವರ್ಗದ ಸಮಸ್ಯೆಗಳು ಮತ್ತು ವಿಳಂಬ ನೀತಿಯನ್ನು ತೊಡೆದುಹಾಕಲು ಈ ಕ್ರಮವನ್ನು ಕೈಗೊಂಡಿದೆ, ದೇಶದೆಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ವಿನೂತನ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ.

*ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರ ದತ್ತಾಂಶವನ್ನು ಕೇಂದ್ರೀಕೃತವಾಗಿ ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವೈದ್ಯರ ಅರ್ಹತೆ, ನೋಂದಣಿಯಾದ ವರ್ಷ, ವೈದ್ಯರ ಪರಿಣತಿ ಕ್ಷೇತ್ರವನ್ನು ಕೂಡ ದಾಖಲಿಸಲಾಗುತ್ತದೆ.  

ರಾಷ್ಟ್ರೀಯ ವೈದ್ಯಕೀಯ ಆಯೋಗ

*ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ವೈದ್ಯಕೀಯ ಆಯೋಗ ಕಾಯ್ದೆ 2019ರ ಅನ್ವಯ ಸ್ಥಾಪಿಸಲಾಯಿತು.

*ಈ   ಆಯೋಗವು ಭಾರತದ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಪ್ರಮುಖ ನಿಯಂತ್ರಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

*ಭಾರತದಾದ್ಯಂತ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣವನ್ನು ಮತ್ತು ತರಬೇತಿಯನ್ನು ಕಲ್ಪಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಕೃಷಿ 24/7

*ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ವಾದ್ವಾನಿ ಇನ್‌ಸ್ಟಿಟ್ಯೂಟ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೃಷಿ 24/7 ಕೃತಕ ಬುದ್ಧಿಮತ್ತೆ ಆಧಾರಿತ ಮಾಹಿತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

*ಈ ಯೋಜನೆಗೆ ಗೂಗಲ್ ಸಂಸ್ಥೆಯು ಬೆಂಬಲ ನೀಡುತ್ತಿದ್ದು, ಕೃಷಿ ಸಂಬಂಧಿತ ವಾರ್ತೆಯನ್ನು ತ್ವರಿತಗಥಿಯಲ್ಲಿ ರೈತ ಸಮುದಾಯಕ್ಕೆ ಒದಗಿಸಲು ಸ್ವಯಂ ಚಾಲಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

*ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು,ಮಳೆಯ ಪ್ರವೃತ್ತಿ, ರೈತರಿಗೆ ಬೇಕಾದ ತಾಂತ್ರಿಕ ಮಾಹಿತಿ ಸೇರಿದಂತೆ ಇರುವ ಸವಲತ್ತುಗಳ ಬಗ್ಗೆ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಮಾಹಿತಿ ಕಲ್ಪಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.