ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬ್ರಾಂಚ್‌ ಆಯ್ಕೆ ಹೇಗೆ?

ಪ್ರದೀಪ್‌ ಕುಮಾರ್‌ ವಿ
Published 7 ಜುಲೈ 2024, 23:31 IST
Last Updated 7 ಜುಲೈ 2024, 23:31 IST
   

ನಾನು ಪಿಯುಸಿ ಮುಗಿಸಿದ್ದು ಈಗ ಬಿ.ಟೆಕ್ ಮಾಡಲು ಇಚ್ಛಿಸಿದ್ದೇನೆ. ಆದರೆ, ಬ್ರಾಂಚ್ ಆಯ್ಕೆಯಲ್ಲಿ ಗೊಂದಲವಿದೆ. ಬಿ.ಟೆಕ್ (ಬ್ರಾಂಚ್) ಆಯ್ಕೆ ಹೇಗೆ? ದಯವಿಟ್ಟು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಎಂಜಿನಿಯರಿಂಗ್ ಕೋರ್ಸಿನಲ್ಲಿ 55ಕ್ಕೂ ಹೆಚ್ಚು ಸ್ಪೆಷಲೈಜೇಷನ್‌ಗಳಿವೆ ಎನ್ನಲಾಗುತ್ತದೆ. ಯಾವುದೇ ಸ್ಪೆಷಲೈಜೇಷನ್ ಮಾಡಿದರೂ  ಕೋರ್ಸ್ ಫಲಿತಾಂಶ ಉತ್ಕೃಷ್ಟವಾಗಿದ್ದರೆ ಬೇಡಿಕೆ ಇದೆ. ಎಂಜಿನಿಯರಿಂಗ್ ಕೋರ್ಸ್ ಮಾಡಲು ತಾರ್ಕಿಕ ಪ್ರತಿಪಾದನಾ ಕೌಶಲ, ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಕೌಶಲ ಮತ್ತು ವಿಶ್ಲೇಷಣಾ ಕೌಶಲಗಳ ಜೊತೆಗೆ ಆಯಾ ಸ್ಪೆಷಲೈಜೇಷನ್ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು.

ಈ ಸಲಹೆಗಳನ್ನು ಗಮನಿಸಿ:

ADVERTISEMENT

• ನಿಮ್ಮ ಅಭಿರುಚಿ, ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಯಾವ ಕ್ಷೇತ್ರದಲ್ಲಿದೆ ಎಂದು ಗಮನಿಸಿ.


• ಅದರಂತೆ ವೃತ್ತಿ ಯೋಜನೆಯನ್ನು ಮಾಡಿ, ಎಲ್ಲಿಯವರೆಗೆ ಓದಬೇಕು ಎಂದು ನಿರ್ಧರಿಸಿ. ಸ್ನಾತಕೋತ್ತರ ಪದವಿಯ ಯೋಜನೆಯಿದ್ದರೆ, ಬಿ.ಟೆಕ್‌ನಲ್ಲಿ ಕೋರ್ ಬ್ರಾಂಚ್ ( ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್) ಆಯ್ಕೆ ಮಾಡಿ, ಎಂ.ಟೆಕ್‌ನಲ್ಲಿ ಸ್ಪೆಷಲೈಜೇಷನ್ ಮಾಡುವುದು ಉತ್ತಮ.


• ನಿಮಗೆ ಆಸಕ್ತಿಯಿರುವ ಬಿ.ಟೆಕ್ ಕೋರ್ಸಿನ ಪಠ್ಯಕ್ರಮ, ಕೋರ್ಸ್ ಕಲಿಕೆಯ ಉದ್ದೇಶ ಮತ್ತು ಗುರಿ, ಕೋರ್ಸ್ ಯೋಜನೆ ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಮ್ಮ ಅಗತ್ಯಕ್ಕೆ ಸರಿಹೊಂದುತ್ತದೆಯೇ ಎಂದು ಮೌಲ್ಯಮಾಪನ ಮಾಡಿ, ಕೋರ್ ಬ್ರಾಂಚ್/ಸ್ಪೆಷಲೈಜೇಷನ್ ಆಯ್ಕೆ ಮಾಡಿ. ಇದಾದ ನಂತರವೂ ಗೊಂದಲವಿದ್ದರೆ, ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ  https://youtu.be/Ly86IyOTYns

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.