ಬೆಂಗಳೂರು:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ದರ್ಜೆ-3 ಮೇಲ್ವಿಚಾರಕೇತರ ವೃಂದದ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪದವೃಂದ ಮತ್ತು ನೇಮಕಾತಿ ನಿಯಮಾವಳಿ 1982 ಮತ್ತು ತದನಂತರದ ತಿದ್ದುಪಡಿ ಆದೇಶಗಳ ಅನುಸಾರ ಹಾಗೂ 371 (ಜೆ) ರನ್ವಯ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ (ಕರ್ನಾಟಕ ಸಾರ್ವಜನಿಕ ಉದ್ಯೋಗ ತಿದ್ದುಪಡಿ ಆದೇಶ 2013) ಅನುಸಾರ ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ದಿನಾಂಕ 06/01/2020 ರಿಂದ ಸಲ್ಲಿಸಬಹುದು. ದಿನಾಂಕ 05/02/2020 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಸಲ್ಲಿಸುವ ಎಲ್ಲಾ ದಾಖಲೆಗಳು/ಪ್ರಮಾಣಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದುಕೊಂಡಿರಬೇಕು ಮತ್ತುದಾಖಲಾತಿ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.
ಹುದ್ದೆಗಳ ವಿವರ
ಚಾಲಕ (ಡ್ರೈವರ್):925 (ಹೈದರಾಬಾದ್ ಕರ್ನಾಟಕ ಸೇರಿ)
ಚಾಲಕ–ಕಂ– ನಿರ್ವಾಹ (ಕಂಡಕ್ಟರ್):694(ಹೈದರಾಬಾದ್ ಕರ್ನಾಟಕ ಸೇರಿ)
ವಿದ್ಯಾರ್ಹತೆ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
1) ತತ್ಸಮಾನ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ ಇಡಿ 73 ಎಸ್‍ಎಲ್‍ಬಿ 2006 ದಿನಾಂಕ:06-09-2006 ರಡಿಯಲ್ಲಿ ನೀಡಲಾದ ನಿರ್ದೇಶನಗಳಂತೆ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್.ಎಸ್.ಎಲ್.ಸಿ.ಗೆ ತತ್ಸಮಾನ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದನ್ನು ಮಾತ್ರ ಪರಿಗಣಿಸಲಾಗುವುದು.
2) ಮುಕ್ತ ವಿಶ್ವವಿದ್ಯಾಲಯದಿಂದ ವಿತರಿಸಿರುವ ಹಾಗೂ ಗರಿಷ್ಠ 500 ಅಂಕಗಳ ಎಸ್.ಎಸ್.ಸಿ. ವಿದ್ಯಾರ್ಹತೆಯ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.
3) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮತ್ತು ಇತರೆ ಯಾವುದೇ ಸಂಘ ಸಂಸ್ಥೆ /ವಿಶ್ವವಿದ್ಯಾಲಯದಿಂದ ನಡೆಸಲಾಗುವ ಎಸ್‍ಎಸ್‍ಎಲ್‍ಸಿಗೆ ತತ್ಸಮಾನವೆಂದು ತಿಳಿಸಿ ಸಲ್ಲಿಸುವ ಬ್ರಿಡ್ಜ್ ಕೋರ್ಸ್ ಅಂಕಪಟ್ಟಿಗಳನ್ನು ಪರಿಗಣಿಸಲಾಗುವುದಿಲ್ಲ.
ಚಾಲನಾ/ನಿರ್ವಾಹಕ ಪರವಾನಿಗೆ
1. ಚಾಲಕ ಹುದ್ದೆಗೆ:ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಪ್ರಯಾಣಿಕರ/ಸರಕು ಸಾಗಾಣಿಕೆ ಭಾರೀ ವಾಹನ ಚಾಲನಾ ಪರವಾನಿಗೆ ಹೊಂದಿ 2 ವರ್ಷ ಪೂರ್ಣಗೊಂಡಿರಬೇಕು. ಜೊತೆಗೆ, ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.
2. ಚಾಲಕ-ಕಂ-ನಿರ್ವಾಹಕ ಹುದ್ದೆಗೆ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಪ್ರಯಾಣಿಕ/ಸರಕು ಸಾಗಾಣಿಕೆ ಭಾರೀ ವಾಹನ ಚಾಲನಾ ಪರವಾನಿಗೆ ಹೊಂದಿ 2 ವರ್ಷ ಪೂರ್ಣಗೊಂಡಿರಬೇಕು. ಜೊತೆಗೆ, ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.ಚಾಲ್ತಿಯಲ್ಲಿರುವ ಎಂ.ವ್ಹಿ. ನಿರ್ವಾಹಕ ಪರವಾನಿಗೆ ಹಾಗೂ ಬ್ಯಾಡ್ಜ್ ಹೊಂದಿರಬೇಕು.
ದೇಹದಾಢ್ರ್ಯತೆ: ಅಭ್ಯರ್ಥಿಗಳು ಕನಿಷ್ಠ ಈ ಕೆಳಕಂಡ ದೇಹದಾಢ್ರ್ಯತೆ ಹೊಂದಿರಬೇಕು.
1) ಪುರುಷರು: ಎತ್ತರ–163 ಸೆ.ಮೀ, ತೂಕ–55 ಕೆಜಿ
2) ಮಹಿಳೆಯರು:ಎತ್ತರ–153 ಸೆ.ಮೀ, ತೂಕ–50 ಕೆಜಿ
ವಯೋಮಿತಿ:ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡಂತೆವಯೋಮಿತಿ ಹೊಂದಿರತಕ್ಕದ್ದು.
1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 35 ವರ್ಷ
2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 38 ವರ್ಷ
3) ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 40 ವರ್ಷ
ತರಬೇತಿ ಭತ್ಯೆ ಹಾಗೂ ವೇತನ ಶ್ರೇಣಿ:ಸಂಸ್ಥೆಯು ಪ್ರಕಟಿಸುವ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಆಯೆ ್ಕಗೊಂಡ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಕೆಲಸದ ಮೇಲಿನ ತರಬೇತಿಗೆನಿಯೋಜಿಸಲಾಗುವುದು. ತರಬೇತಿ ಅವಧಿಯಲ್ಲಿ ಚಾಲಕರಿಗೆ ರೂ 10,000/- ರಂತೆ ಹಾಗೂ ಚಾಲಕ-ಕಂ-ನಿರ್ವಾಹಕರಿಗೆ ರೂ. 9,100/- ರಂತೆ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು.
ಎರಡು ವರ್ಷಗಳ ಕೆಲಸದ ಮೇಲಿನ ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಚಾಲಕಮತ್ತು ಚಾಲಕ-ಕಂ-ನಿರ್ವಾಹಕರನ್ನು ನಿಯಮಾನುಸಾರ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನಿಯೋಜಿಸಲಾಗುವುದು. ಖಾಯಂ ಪೂರ್ವ ಪರೀಕ್ಷಾರ್ಥಸೇವಾವಧಿಯಲ್ಲಿ ವೇತನ ಶ್ರೇಣಿ ರೂ. 12400-19550 ರಂತೆ ವೇತನ ಹಾಗೂ ಇತರೆ ಭತ್ಯೆಗಳಿಗೆ ಅರ್ಹರಿರುತ್ತಾರೆ.
ಅರ್ಜಿ ಶುಲ್ಕ:ಸಾಮಾನ್ಯ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 600 ಹಾಗೂಪ.ಜಾತಿ, ಪ.ಪಂಗಡ. ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 300 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅರ್ಜಿಯನ್ನು ಸಲ್ಲಿಸುವ ವಿಧಾನ
1) ಅರ್ಜಿಯನ್ನು ಕಡ್ಡಾಯವಾಗಿ ಆನ್‍ಲೈನ್ ಮುಖಾಂತರವೇ ಈ.ಕ.ರ.ಸಾ ಸಂಸ್ಥೆಯ ವೆಬ್‍ಸೈಟ್ಮೂಲಕವೇ ಸಲ್ಲಿಸಬೇಕು.
2) ನಿಗದಿತ ಅವಧಿಯ ನಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
3) ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣದಿಂದಲೂ ಆನ್‍ಲೈನ್‍ನಲ್ಲಿ ತಿದ್ದುಪಡಿ ಮಾಡಲು
ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05/02/2020 ( ಸಂಜೆ 5.30)
ಅಧಿಸೂಚನೆಯ ಲಿಂಕ್:https://bit.ly/2T1IwX1
ವೆಬ್‌ಸೈಟ್:http://www.nekrtc.org/Jobs/index.html
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.