ADVERTISEMENT

ನೇಮಕಾತಿ ಚೇತರಿಕೆ: ಲಿಂಕ್ಡ್‌ಇನ್‌

ಪಿಟಿಐ
Published 17 ಆಗಸ್ಟ್ 2020, 14:18 IST
Last Updated 17 ಆಗಸ್ಟ್ 2020, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುತ್ತಿರುವುದರಿಂದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ನೇಮಕಾತಿಯಲ್ಲಿ ಶೇಕಡ 35ರಷ್ಟು ಚೇತರಿಕೆ ಕಂಡುಬಂದಿದೆ ಎಂದು ಲಿಂಕ್ಡ್‌ಇನ್‌ ಹೇಳಿದೆ. ಕಾರ್ಮಿಕ ಮಾರುಕಟ್ಟೆಯ ಕುರಿತು ಅದು ವರದಿ ಬಿಡುಗಡೆ ಮಾಡಿದೆ.

ಏಪ್ರಿಲ್‌ನಲ್ಲಿ ಶೇ – 50ರಷ್ಟು ಕುಸಿತ ಕಂಡಿದ್ದ ನೇಮಕಾತಿ ಚಟುವಟಿಕೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಜೂನ್‌ನಲ್ಲಿ ಇಳಿಕೆ ಪ್ರಮಾಣವು ಶೇ –15ರಷ್ಟಾಗಿದೆ ಎಂದು ವಿವರಿಸಿದೆ.

‘ಎರಡನೇ ಹಂತದಲ್ಲಿ ಸೋಂಕು ಹರಡುವ ಅಪಾಯ ಎದುರಾದಾಗ ಕೆಲವು ರಾಜ್ಯಗಳು ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಿದವು. ಇದರಿಂದಾಗಿ, ಆರ್ಥಿಕ ಬೆಳವಣಿಗೆಯ ಬಗ್ಗೆ ಅನಿಶ್ಚಿತ ಸ್ಥಿತಿ ಎದುರಾಗಿದೆ. ಹೀಗಾಗಿ, ಕಂಪನಿಗಳಲ್ಲಿನ ನೇಮಕ ಚಟುವಟಿಕೆ ಮಂದಗತಿಯಲ್ಲಿಯೇ ಸಾಗುವ ಅಂದಾಜು ಮಾಡಲಾಗಿದೆ’ ಎಂದೂ ಹೇಳಿದೆ.

ADVERTISEMENT

ಪುರುಷ ಮತ್ತು ಮಹಿಳೆಯರ ನೇಮಕದಲ್ಲಿನ ಅಂತರವು ಫೆಬ್ರುವರಿಯಲ್ಲಿ ಶೇ 40ರಷ್ಟಿತ್ತು. ಇದು ಜೂನ್‌ ವೇಳೆಗೆ ಶೇ 30ಕ್ಕೆ ಇಳಿಕೆ ಕಂಡಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ. 2020ರ ಜನವರಿಯಲ್ಲಿ ಉದ್ಯೋಗಕ್ಕಾಗಿ ಲಿಂಕ್ಡ್‌ಇನ್‌ ಮೂಲಕ 90 ಮಂದಿ ಅರ್ಜಿ ಸಲ್ಲಿಸಿದ್ದರು. ಇದು 2020ರ ಜೂನ್‌ ವೇಳೆಗೆ 180ಕ್ಕೆ ಏರಿಕೆಯಾಗಿದೆ.

ಬೇಡಿಕೆ ಯಾರಿಗೆ?

* ಸಾಫ್ಟ್‌ವೇರ್‌ ಎಂಜಿನಿಯರ್‌

* ಬಿಸಿನೆಸ್‌ ಡೆವಲಪ್‌ಮೆಂಟ್‌ ಮ್ಯಾನೇಜರ್‌

* ಸೇಲ್ಸ್‌ ಮ್ಯಾನೇಜರ್

* ಬಿಸಿನೆಸ್‌ ಅನಲಿಸ್ಟ್‌

* ಕಂಟೆಂಟ್‌ ರೈಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.