ಖಾಸಗಿ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ಯಾಂಕುಗಳಲ್ಲಿ ಒಂದಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್(IDFC First), ಇದೇ ಮಾರ್ಚ್ ತಿಂಗಳೊಳಗೆ ರಾಜ್ಯದಾದ್ಯಂತ ಸುಮಾರು 20 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಿದೆ. ಇದರಿಂದಾಗಿ ಸುಮಾರು 500 ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಮಾತ್ರವಲ್ಲ, 2024ರ ಒಳಗೆ ರಾಜ್ಯದಲ್ಲಿ ಸುಮಾರು 1500 ರಷ್ಟು ಅಧಿಕಾರಿ ಹಂತದ(Officer cadre) ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
ದೇಶದಾದ್ಯಂತವಿರುವ ತನ್ನ ಶಾಖೆಗಳಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬೆಂಗಳೂರಿನ ಬ್ರೆಟ್(BReT) ಸಲ್ಯೂಷನ್ಸ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯನ್ನು ‘ನೇಮಕಾತಿ ಕನ್ಸಲ್ಟೆಂಟ್ ಸಂಸ್ಥೆ‘ಯಾಗಿ ನಿಯೋಜಿಸಿದೆ.
ಯಾವುದೇ ವಿಭಾಗದಲ್ಲಿ ಪದವಿ ಪಡೆದಿರುವ, 30 ವರ್ಷ ವಯೋಮಾನದ ಅಭ್ಯರ್ಥಿಗಳು ಬ್ರೆಟ್ ಸಲ್ಯೂಷನ್ಸ್ ಜಾಲತಾಣದ (www.brets.in) ಮೂಲಕ ಉಚಿತವಾಗಿ ಹೆಸರು ನೋಂದಾಯಿಸಿಕೊಂಡು, ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ಪ್ರಕ್ರಿಯೆಯು 45 ನಿಮಿಷಗಳ ಆನ್‌ಲೈನ್ ಪರೀಕ್ಷೆ ಹಾಗೂ ಬ್ಯಾಂಕಿನ ಕಚೇರಿಯಲ್ಲಿ ವೈಯಕ್ತಿಕ ಸಂದರ್ಶನವನ್ನು ಹೊಂದಿರುತ್ತದೆ.
ಬ್ರೆಟ್ ಸಲ್ಯೂಷನ್ಸ್, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿದೆ. ವಿವರಗಳಿಗಾಗಿ jobsadmin@brets.in ಮೇಲ್ ಮಾಡಬಹುದು. ದೂರವಾಣಿ 7259028984 / 7259028983 / 7259028986 / 9686999732 ಮೂಲಕ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.