ADVERTISEMENT

ITBPಯಲ್ಲಿ ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್ 128 ಹುದ್ದೆಗಳು: ವಿವರ ಇಲ್ಲಿದೆ

ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ವಿವಿಧ ಹುದ್ದೆಗಳು

Manjunath C Bhadrashetti
Published 29 ಜುಲೈ 2024, 9:46 IST
Last Updated 29 ಜುಲೈ 2024, 9:46 IST
ಐಟಿಬಿಪಿ ಪೊಲೀಸ್, ಸಾಂದರ್ಭಿಕ ಚಿತ್ರಗಳು : ಪಿಟಿಐ
ಐಟಿಬಿಪಿ ಪೊಲೀಸ್, ಸಾಂದರ್ಭಿಕ ಚಿತ್ರಗಳು : ಪಿಟಿಐ   

ಬೆಂಗಳೂರು: ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ (ITBP) ಹೆಡ್ ಕಾನ್‌ಸ್ಟೆಬಲ್ ವೆಟೆರಿನರಿ, ಕಾನ್‌ಸ್ಟೆಬಲ್ ಅನಿಮಲ್ ಟ್ರಾನ್ಸ್‌ಫೋರ್ಟ್ ಮತ್ತು ಕಾನ್‌ಸ್ಟೆಬಲ್ ಕೆನಲ್ಮೆನ್ (ಶ್ವಾನ ಪಡೆ) ಎಂಬ ಮೂರು ಪ್ರಕಾರದ ಒಟ್ಟು 128 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ವೆಟೆರಿನರಿ (ಪುರುಷ–ಮಹಿಳೆ) ಒಟ್ಟು ಹುದ್ದೆಗಳು 9, ವೇತನ ₹81 ಸಾವಿರದವರೆಗೆ.

ಕಾನ್‌ಸ್ಟೆಬಲ್ ಅನಿಮಲ್ ಟ್ರಾನ್ಸ್‌ಫೋರ್ಟ್ (ಪುರುಷ–ಮಹಿಳೆ) ಒಟ್ಟು ಹುದ್ದೆಗಳು 115, ವೇತನ ₹69 ಸಾವಿರದವರೆಗೆ.

ADVERTISEMENT

ಕಾನ್‌ಸ್ಟೆಬಲ್ ಕೆನಲ್ಮೆನ್ (ಪುರುಷರಿಗೆ ಮಾತ್ರ) 4, ವೇತನ ₹69 ಸಾವಿರದವರೆಗೆ.

ಅರ್ಜಿ ಸಲ್ಲಿಕೆ ಆಗಸ್ಟ್ 12ರಿಂದ ಆರಂಭವಾಗಲಿದ್ದು ಸೆಪ್ಟೆಂಬರ್ 10ಕ್ಕೆ ಅಂತ್ಯವಾಗಲಿದೆ. ಅರ್ಜಿ ಸಲ್ಲಿಸಲು ಶುಲ್ಕ ₹ 100 ಇದ್ದು, ಎಸ್‌ಸಿ/ಎಸ್‌ಟಿ, ಮಹಿಳೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಹೆಡ್ ಕಾನ್‌ಸ್ಟೆಬಲ್ ವೆಟೆರಿನರಿ, ಕಾನ್‌ಸ್ಟೆಬಲ್ ಕೆನಲ್ಮೆನ್ ಹುದ್ದೆಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಕಾನ್‌ಸ್ಟೆಬಲ್ ಅನಿಮಲ್ ಟ್ರಾನ್ಸ್‌ಫೋರ್ಟ್ ಹುದ್ದೆಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.

ಹೆಡ್ ಕಾನ್‌ಸ್ಟೆಬಲ್ ವೆಟೆರಿನರಿ ಹುದ್ದೆಗಳಿಗೆ 12 ನೇ ತರಗತಿ ಉತ್ತೀರ್ಣ ಜೊತೆಗೆ ವೆಟೆರಿನರಿ ಡಿಪ್ಲೋಮಾ ಅಥವಾ ಪ್ಯಾರಾ ವೆಟೆರಿನರಿ ಕೋರ್ಸ್ ಮುಗಿಸಿರಬೇಕು. ಕಾನ್‌ಸ್ಟೆಬಲ್ ಅನಿಮಲ್ ಟ್ರಾನ್ಸ್‌ಫೋರ್ಟ್, ಕಾನ್‌ಸ್ಟೆಬಲ್ ಕೆನಲ್ಮೆನ್ ಹುದ್ದೆಗಳಿಗೆ 10 ನೇ ತರಗತಿ ಪಾಸಾಗಿದ್ದರೆ ಸಾಕು. ಈ ಎಲ್ಲ ಹುದ್ದೆಗಳಿಗೆ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಇರಲಿದೆ.

ವಿವರವಾದ ಅಧಿಸೂಚನೆಗೆ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು recruitment.itbpolice.nic.in ವೆಬ್‌ಸೈಟ್ ಪರಿಶೀಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.