ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) 451 ‘ಕಾನ್‌ಸ್ಟೆಬಲ್ ಡ್ರೈವರ್’ಮತ್ತು 'ಕಾನ್‌ಸ್ಟೆಬಲ್ ಡಿಸಿಪಿಒ' ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಾನ್‌ಸ್ಟೆಬಲ್ ಡ್ರೈವರ್ ಕೆಟಗರಿಯಲ್ಲಿ 183 ಹುದ್ದೆಗಳು, ಕಾನ್‌ಸ್ಟೆಬಲ್ ಡಿಸಿಪಿಒ(ಡ್ರೈವರ್ ಫಾರ್ ಫೈರ್ ಸರ್ವೀಸಸ್) ಕೆಟಗರಿಯಲ್ಲಿ 268 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತರು ₹100 ಶುಲ್ಕ ದೊಂದಿಗೆ ಫೆಬ್ರವರಿ 22ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ https://www.cisfrectt.in/ಗೆ ಭೇಟಿ ನೀಡಬಹುದು.
ಶೈಕ್ಷಣಿಕ ಮತ್ತು ಇನ್ನಿತರೆ ಅರ್ಹತೆಗಳು: 10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು . ಹೆವಿ ಮೋಟಾರ್ ವೆಹಿಕಲ್ ಅಥವಾ ಟ್ರಾನ್ಸ್‌ಪೋರ್ಟ್ ವೆಹಿಕಲ್ ಚಾಲನಾ ಪರವಾನಗಿ ಪತ್ರ ಪಡೆದಿರಬೇಕು. ಜೊತೆಗೆ, ಲಘು ಮೋಟಾರ್ ವಾಹನ ಚಾಲನೆ ಮತ್ತು ಗೇರ್ ಇರುವ ಮೋಟಾರ್ ಸೈಕಲ್ ಚಾಲನಾ ಪರವಾನಗಿ ಪತ್ರ ಹೊಂದಿರಬೇಕು. ಜೊತೆಗೆ ಮೂರು ವರ್ಷಗಳ ಡ್ರೈವಿಂಗ್ ಅನುಭವವಿರಬೇಕು.
ವಯೋಮಿತಿ: ಕನಿಷ್ಠ 21ವರ್ಷ. ಗರಿಷ್ಠ 27 ವರ್ಷಗಳು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳವರೆಗೆ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ವಯೋಮಿತಿ ಸಡಿಲಿಕೆ ಇದೆ. ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಸರ್ಕಾರಿ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದವರು ಮತ್ತು ಒಬಿಸಿ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಎಸ್ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಪುರುಷರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಆಯ್ಕೆ ಪ್ರಕ್ರಿಯೆ ಹೇಗೆ:
ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲನೆಯ ಹಂತದಲ್ಲಿ ದೇಹದಾರ್ಢ್ಯ ಪರೀಕ್ಷೆ. ಎರಡನೇ ಹಂತ ಲಿಖಿತ ಪರೀಕ್ಷೆ ಮತ್ತು ಮೂರನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಮೊದಲು ದೇಹದಾರ್ಢ್ಯ ಪರೀಕ್ಷೆ (ಪಿಇಟಿ ಮತ್ತು ಪಿಎಸ್‌ಟಿ) ನಂತರ, ಒಎಂಆರ್ ಶೀಟ್ ಆಧಾರಿತ / ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು ನಡೆಯಲಿದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.
ಆಡಳಿತಾತ್ಮಕ ಕಾರಣ ಅಥವಾ ಸಂದರ್ಭಕ್ಕೆ ಅನುಗುಣವಾಗಿ ಮೊದಲ ಎರಡು ಹಂತದ ಪರೀಕ್ಷೆಗಳ ಅನುಕ್ರಮವನ್ನು ಸಿಎಸ್‌ಐಎಫ್ ತನ್ನ ವಿವೇಚನೆಯೊಂದಿಗೆ ಬದಲಾಯಿಸಲು ಅವಕಾಶವಿದೆ. ಒಂದು ಪಕ್ಷ ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಿದರೆ, ಈ ಪರೀಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.