1. ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನ
ಪ್ರಮಾಣ ಎಷ್ಟು?
(1) 17.9
(2) 17.2
(3) 16.5
(4) 16.9
ಉತ್ತರ: (3)
2020ರಲ್ಲಿ 1000 ಜನಸಂಖ್ಯೆಗೆ ಇದ್ದ ಜನನ ಪ್ರಮಾಣ 16.5 ಆಗಿತ್ತು.
2. ಕರ್ನಾಟಕದಲ್ಲಿ 2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ ಎಷ್ಟು ?
(1) 6.5
(2) 6.3
(3) 6.7
(4) 6.2
ಉತ್ತರ: (4)
2020 ರಲ್ಲಿ 1000 ಜನಸಂಖ್ಯೆಗೆ ಇದ್ದ ಮರಣ ಪ್ರಮಾಣ 6.2 ಆಗಿತ್ತು.
3. ಕರ್ನಾಟಕದಲ್ಲಿ 2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣ ಎಷ್ಟು ?
(1) 83
(2) 69
(3) 92
(4) 97
ಉತ್ತರ: (2)
2020 ರಲ್ಲಿ 100,000 ಜೀವಂತ ಜನನಗಳಿಗೆ ಇದ್ದ ತಾಯಂದಿರ ಮರಣ ಪ್ರಮಾಣವು 69 ಆಗಿತ್ತು.
4. ಕರ್ನಾಟಕದಲ್ಲಿ 2020 ರಲ್ಲಿ 1000 ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣ ಎಷ್ಟು ?
(1) 25
(2) 21
(3) 19
(4) 23
ಉತ್ತರ: (3)
2020 ರಲ್ಲಿ 1000 ಜೀವಂತ ಜನನಗಳಿಗೆ ಇದ್ದ ಶಿಶು ಮರಣ ಪ್ರಮಾಣವು 19 ಆಗಿತ್ತು.
5. ಕರ್ನಾಟಕದಲ್ಲಿ 2020 ರಲ್ಲಿ ಪ್ರತಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ ಪ್ರಮಾಣ ಎಷ್ಟು ?
(1) 28
(2) 26
(3) 29
(4) 21
ಉತ್ತರ: (4)
2020 ರಲ್ಲಿ 1000 ಮಕ್ಕಳಿಗೆ ಇದ್ದ ಐದು ವರ್ಷದೊಳಗಿನ ಮರಣ
ಪ್ರಮಾಣ 21 ಆಗಿತ್ತು.
6. ಕರ್ನಾಟಕದಲ್ಲಿ 2020 ರಲ್ಲಿ ಎಷ್ಟು ಶೇಕಡಾ ದಂಪತಿಗಳು ಕುಟುಂಬ ಯೋಜನಾ ಕ್ರಮಗಳನ್ನು ಕೈಗೊಂಡಿದ್ದಾರೆ ?
(1) 63%
(2) 67.9%
(3) 68.7%
(4) 70.9%
ಉತ್ತರ: (3)
2020 ರಲ್ಲಿ ಕುಟುಂಬ ಯೋಜನೆ ಚಿಕಿತ್ಸೆಗೆ ಒಳಪಟ್ಟ ದಂಪತಿಗಳ ಶೇಕಡಾವಾರು ಪ್ರಮಾಣವು 68.7% ಆಗಿದೆ.
7. ಕರ್ನಾಟಕದಲ್ಲಿ 2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ ಎಷ್ಟು ?
(1) 67.9 ವರ್ಷಗಳು
(2) 70.9 ವರ್ಷಗಳು
(3) 69.7 ವರ್ಷಗಳು
(4) 68.7 ವರ್ಷಗಳು
ಉತ್ತರ: (3)
2020 ರಲ್ಲಿ ಪುರುಷರ ಸರಾಸರಿ ಜೀವಿತಾವಧಿ 67.9 ವರ್ಷಗಳು.
8. ಕರ್ನಾಟಕದಲ್ಲಿ 2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ ಎಷ್ಟು?
(1) 67.9 ವರ್ಷಗಳು
(2) 70.9 ವರ್ಷಗಳು
(3) 69.7 ವರ್ಷಗಳು
(4) 68.7 ವರ್ಷಗಳು
ಉತ್ತರ: (2)
2020 ರಲ್ಲಿ ಇದ್ದ ಮಹಿಳೆಯರ ಸರಾಸರಿ ಜೀವಿತಾವಧಿ 70.9 ವರ್ಷಗಳು.
9. ರಾಜ್ಯದಲ್ಲಿ ಎಷ್ಟು ಶೇಕಡಾವಾರು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ ?
(1) 87%
(2) 90%
(3) 97%
(4) 100%
ಉತ್ತರ: (3)
ರಾಜ್ಯದಲ್ಲಿ ಎಷ್ಟು ಶೇಕಡಾವಾರು 97 ರಷ್ಟು ಹೆರಿಗೆಗಳು ಸಾಂಸ್ಥಿಕ ಹೆರಿಗೆಗಳಾಗಿವೆ
10. 2020 ರಲ್ಲಿ ರಾಜ್ಯದಲ್ಲಿ ಇದ್ದ ಒಟ್ಟು ಫಲವತ್ತತೆ ದರ ಎಷ್ಟು?
(1) 1.5
(2) 1.6
(3) 1.7
(4) 1.8
ಉತ್ತರ: (3)
ಕರ್ನಾಟಕದಲ್ಲಿ 2015–16 ರಲ್ಲಿ 1.8 ರಷ್ಟಿದ್ದ ಒಟ್ಟು ಫಲವತ್ತತೆ ದರ 2020 ರಲ್ಲಿ 1.7 ಕ್ಕೆ ಇಳಿದಿದೆ.
(2015 ರಿಂದ 2020 ರವರೆಗೆ ಕರ್ನಾಟಕದ ಆರೋಗ್ಯ ಸೂಚಕಗಳಿಗಾಗಿ ಇಂಗ್ಲಿಷ್ ಆವೃತ್ತಿಯಲ್ಲಿ ನೀಡಿದ ಕೋಷ್ಟಕವನ್ನು ನೋಡಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.