ADVERTISEMENT

KPSC: 400 ಪಶುವೈದ್ಯಾಧಿಕಾರಿ ಹುದ್ದೆ- ಬಹಳ ವರ್ಷಗಳ ನಂತರ ಸುವರ್ಣವಕಾಶ

ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಪ್ರಕ್ರಿಯೆ ಆರಂಭಿಸಿದೆ.

Manjunath C Bhadrashetti
Published 7 ಆಗಸ್ಟ್ 2024, 20:30 IST
Last Updated 7 ಆಗಸ್ಟ್ 2024, 20:30 IST
   

ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಬಹಳ ವರ್ಷಗಳ ನಂತರ ‘ಪಶುವೈದ್ಯಾಧಿಕಾರಿ’ ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಲಾಗಿದೆ.

ಸದ್ಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಮೂಲ ವೃಂದದ 342 ಹುದ್ದೆಗಳು ಹಾಗೂ ಬ್ಯಾಕ್‌ಲಾಗ್‌ನ 58 ಹುದ್ದೆಗಳು ಸೇರಿ ಒಟ್ಟು 400 ಹುದ್ದೆಗಳಿವೆ. ಈ ಹುದ್ದೆಗಳು ಗ್ರೂಪ್ ‘ಎ’ ಶ್ರೇಣಿಯ ಹುದ್ದೆಗಳಾಗಿರುತ್ತವೆ.

ADVERTISEMENT

ಇದೇ ಆಗಸ್ಟ್ 12 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಸೆಪ್ಟೆಂಬರ್ 12ಕ್ಕೆ ಅಂತ್ಯವಾಗಲಿದೆ.

ಅಂಗೀಕೃತ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ಪದವಿ ಪಡೆದು (B.V.Sc/B.V.Sc&AH) ಕರ್ನಾಟಕ ವೆಟೆರಿನರಿ ಕೌನ್ಸಿಲ್‌ನಲ್ಲಿ ಅಥವಾ ಇಂಡಿಯನ್ ವೆಟೆರಿನರಿ ಕೌನ್ಸಿಲ್‌ನಲ್ಲಿ (IVC/VCI) ನೋಂದಾಯಿಸಲ್ಪಟ್ಟ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ.

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹600. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹300. ಮಾಜಿ ಸೈನಿಕರಿಗೆ ₹50, ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಗರಿಷ್ಠ 35. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗೆ https://kpsc.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡಿ.

ಪರೀಕ್ಷೆ ಹೇಗಿರಲಿದೆ?
ಇದು ನೇರ ನೇಮಕಾತಿಯಾಗಿದ್ದು ಸಂದರ್ಶನ ಇರುವುದಿಲ್ಲ. ಕನ್ನಡ ಕಡ್ಡಾಯ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷಾ ವಿಧಾನದ ಮೂಲಕ ನೇಮಕಾತಿ ನಡೆಯಲಿದೆ. ಬಹುಆಯ್ಕೆ ಮಾದರಿಯ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ನಾಲ್ಕು ತಪ್ಪು ಉತ್ತರಗಳಿಗೆ ಒಂದು ಋಣಾತ್ಮಕ ಅಂಕ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಶೇಕಡಾವಾರು ಮೆರಿಟ್ ಆಧಾರದ ಮೇಲೆಯೇ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
ಕಂಪ್ಯೂಟರ್ ಪರೀಕ್ಷೆ ನಡೆಯುವ ಸಂಭವ
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಕೆಪಿಎಸ್‌ಸಿ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ ಅಥವಾ ಸಿಬಿಆರ್‌ಟಿ) ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಆಯೋಗ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಯಾವುದಕ್ಕೂ ಅಭ್ಯರ್ಥಿಗಳು ಸಿಬಿಟಿ ಬಗ್ಗೆ ಅಣಕು ಪರೀಕ್ಷೆ (Mock Test) ತೆಗೆದುಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.