ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ‘ಗ್ರೂಪ್– ಬಿ’ ವೃಂದದ 672 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
‘ಕೃಷಿ ಅಧಿಕಾರಿ’ ಎಂಬ 86 ಹುದ್ದೆಗಳು ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಎಂಬ 586 ಹುದ್ದೆಗಳಿವೆ.
ಅಕ್ಟೋಬರ್ 7ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ನವೆಂಬರ್ 7 ಅರ್ಜಿ ಸಲ್ಲಿಸಲು ಕಡೆಯ ದಿನ.
ಕೃಷಿ ಅಧಿಕಾರಿ ಹುದ್ದೆಗೆ ಬಿ.ಎಸ್ಸಿ ಕೃಷಿ ಅಥವಾ ಬಿ.ಎಸ್ಸಿ (ಆನರ್ಸ್) ಕೃಷಿ ಪದವಿ ಪಾಸಾಗಿರಬೇಕು. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಬಿ.ಎಸ್ಸಿ ಅಗ್ರಿ ಸೇರಿದಂತೆ 9 ಬಗೆಯ ಕೃಷಿ ಸಂಬಂಧಿ ವಿಷಯದಲ್ಲಿ ಯಾವುದಾದರೂ ಒಂದು ಪದವಿ ಪಾಸಾಗಿರಬೇಕು.
ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಿಗೆ 38 ವರ್ಷ. 2ಎ, 2ಬಿ, 3ಎ, 3ಬಿ ಅವರಿಗೆ 41. ಎಸ್‌ಸಿ, ಎಸ್‌ಟಿ, ಪ್ರವರ್ಗ 1 ವಿಭಾಗದವರಿಗೆ 43 ವರ್ಷ.
ಶುಲ್ಕ ಸಾಮಾನ್ಯ ವರ್ಗದವರಿಗೆ ₹600. 2ಎ, 2ಬಿ, 3ಎ, 3ಬಿ ಅವರಿಗೆ 300. ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.
ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಆಯೋಗದ https://kpsc.kar.nic.in/ ಪರಿಶೀಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.